ಯೋಧನಾಗಲು ಶಿಕ್ಷಕರೇ ಪ್ರೇರಣೆ: ಕರ್ನಲ್‌ ಇಂದ್ರಜಿತ್‌ ಘೋಷಾಲ್‌

7
12 ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ

ಯೋಧನಾಗಲು ಶಿಕ್ಷಕರೇ ಪ್ರೇರಣೆ: ಕರ್ನಲ್‌ ಇಂದ್ರಜಿತ್‌ ಘೋಷಾಲ್‌

Published:
Updated:

ಬೆಂಗಳೂರು: ‘ಕಾರ್ಗಿಲ್‌ ಯುದ್ಧದಲ್ಲಿ ನಾನು 13 ವೈರಿಗಳನ್ನು ಕೊಂದಿದ್ದೇನೆ. ನನ್ನ ಎಲ್ಲಾ ಸಾಧನೆಗೂ ಶಿಕ್ಷಕರು ತೋರಿದ ಹಾದಿ ಕಾರಣ’ ಎಂದು ಎನ್‌ಸಿಸಿ ವಿಭಾಗದ ಜಂಟಿ ನಿರ್ದೇಶಕ ಕರ್ನಲ್‌ ಇಂದ್ರಜಿತ್‌ ಘೋಷಾಲ್‌ ಅವರು ಹೇಳಿದರು.

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ತಂದೆ, ತಾಯಿಯ ಕೈಬೆರಳನ್ನು ಬಿಟ್ಟ ಮಗು ಶಿಕ್ಷಕರ ಕೈ ಹಿಡಿದುಕೊಳ್ಳುತ್ತದೆ. ಸಮಾಜದ ಹಲವು ಮಗ್ಗಲುಗಳನ್ನು ಶಿಕ್ಷಕರು ನಮಗೆ ತಿಳಿಸುತ್ತಾರೆ. ನಾನು ಬೆಂಗಳೂರಿನಲ್ಲಿಯೇ ಶಿಕ್ಷಣವನ್ನು ಆರಂಭಿಸಿದೆ. ಆ ನಂತರ ಬೇರೆ ಕಡೆ ಓದಿದೆ. ಆದರೆ ಮಗುವಿನ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ತುಂಬಾ ದೊಡ್ಡದು’ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ 12 ಸಾಧಕರಿಗೆ ಉತ್ತಮ ಶಿಕ್ಷಕರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !