ಮಂಗಳವಾರ, ಅಕ್ಟೋಬರ್ 26, 2021
24 °C

ಟೆಕ್‌ ಮಹಿಂದ್ರಾದಿಂದ ಆಮ್ಲಜನಕ ಘಟಕ, ಆಂಬುಲೆನ್ಸ್‌ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ವಿರುದ್ಧ ಹೋರಾಡಲು ಟೆಕ್‌ ಮಹಿಂದ್ರಾ ಪ್ರತಿಷ್ಠಾನವು  ಆಮ್ಲಜನಕ ಉತ್ಪಾದಕ ಘಟಕ ಹಾಗೂ ಎರಡು ಆಂಬುಲೆನ್ಸ್‌ ವಾಹನಗಳನ್ನು ವಿವಿಧ ಆಸ್ಪತ್ರೆಗಳಿಗೆ ಕೊಡುಗೆಯಾಗಿ ನೀಡಿದೆ.

ನಗರದ ಶ್ರೀಕೃಷ್ಣ ಸೇವಾಶ್ರಮ ಆಸ್ಪತ್ರೆಗೆ ಒಂದು ಆಂಬುಲೆನ್ಸ್‌, ಸೇಂಟ್‌ ಫಿಲೋಮಿನಾ ಆಸ್ಪತ್ರೆಗೆ ಆಂಬುಲೆನ್ಸ್‌ ಹಾಗೂ ಆಮ್ಲಜನಕ ಉತ್ಪಾದಕ ಘಟಕವನ್ನು ನೀಡಿದ್ದು, ಪಾಲಿಕೆಯ ವಿಶೇಷ ಆಯುಕ್ತ ಡಿ.ರಂದೀಪ್ ಅವರು ಮಂಗಳವಾರ ಚಾಲನೆ ನೀಡಿದರು.

‘ಕೋವಿಡ್‌ ತೀವ್ರಗೊಂಡಿದ್ದ ಸಮಯದಲ್ಲಿ ಆಂಬುಲೆನ್ಸ್‌ ಮತ್ತು ಆಮ್ಲಜನಕದ ಸಿಲಿಂಡರ್‌ಗಳಿಗಾಗಿ ಬೆಂಗಳೂರು ಕಠಿಣ ಸಂದರ್ಭವನ್ನು ಎದುರಿಸಿತು. ಮಹಿಂದ್ರಾದ ಈ ಕೊಡುಗೆಗಳು ಜನರಿಗೆ ಉಪಯುಕ್ತವಾಗಲಿವೆ’ ಎಂದು ರಂದೀಪ್ ಹೇಳಿದರು. 

ಟೆಕ್ ಮಹಿಂದ್ರಾ ಪ್ರತಿಷ್ಠಾನದ ಕಾರ್ಪೊರೇಟ್ ಸೇವೆ ವಿಭಾಗದ ಸೈಯದ್‌ ಅತೀಕ್,‘ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಆಮ್ಲಜನಕದ ಕೊರತೆ ಹೆಚ್ಚಾಗಿತ್ತು. ಅದನ್ನು ಮನಗಂಡು ಭವಿಷ್ಯದ ದೃಷ್ಟಿಯಿಂದ ಆಸ್ಪತ್ರೆಗಳಲ್ಲಿ ಈ ಸೌಲಭ್ಯಗಳನ್ನು ಒದಗಿಸಿದೆ’ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು