ಬೆಂಗಳೂರು: ಹದಿಹರೆಯ ಗರ್ಭಧಾರಣೆ ಅಪಾಯದ ಬಗ್ಗೆ ಆರೋಗ್ಯ ಇಲಾಖೆ ಹಾಗೂ ಸರ್ಕಾರೇತರ ಸಂಸ್ಥೆಗಳು ಜಾಗೃತಿ ಮೂಡಿಸುತ್ತಿದ್ದರೂ, ಇಲ್ಲಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಕಳೆದ ವರ್ಷ 1,190 ಹದಿಹರೆಯದ ಗರ್ಭಧಾರಣೆ ಪ್ರಕರಣಗಳು ವರದಿಯಾಗಿವೆ.

ಆಸ್ಪತ್ರೆಯ ವೈದ್ಯರು 2018ರಲ್ಲಿ 1,330 ಹಾಗೂ 2019ರಲ್ಲಿ 1,531 ಹದಿಹರೆಯದ ಗರ್ಭಧಾರಣೆ ಪ್ರಕರಣಗಳನ್ನು ನೋಡಿದ್ದಾರೆ. 2020 ಹಾಗೂ 2021ರಲ್ಲಿ ಕೋವಿಡ್ ಕಾರಣ ಈ ಪ್ರಕರಣಗಳನ್ನು ನೋಂದಣಿ ಮಾಡಿಲ್ಲ. 13 ವರ್ಷದ ಬಾಲಕಿ ಗರ್ಭಧರಿಸಿದ ಪ್ರಕರಣವೂ ಇಲ್ಲಿ ವರದಿಯಾಗಿದೆ.

‘ಶೇ 70ರಷ್ಟು ಪ್ರಕರಣಗಳಲ್ಲಿ ಗರ್ಭಧರಿಸಿದವರು ವಿವಾಹಿತರಾಗಿದ್ದಾರೆ’ ಎಂದು ಆಸ್ಪತ್ರೆಯ ಸಲಹೆಗಾರ್ತಿ ಚಂದನಾ ಡೆಲೀ ತಿಳಿಸಿದರು.

‘ಹದಿಹರೆಯದವರು ಗರ್ಭಧರಿಸಿದಲ್ಲಿ ಹೆರಿಗೆ ವೇಳೆ ಅಪಾಯ ಇರುತ್ತದೆ. ಅಧಿಕ ರಕ್ತದೊತ್ತಡದ ಸಮಸ್ಯೆ, ಮಗುವಿನ ಅಪೂರ್ಣ ಬೆಳವಣಿಗೆ, ರಕ್ತ ಹೀನತೆ, ಅಪೌಷ್ಟಿಕತೆ ಸೇರಿ ವಿವಿಧ ಸಮಸ್ಯೆಗಳು ಕಾಣಿಸಿಕೊಂಡು, ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ’ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಸಿ. ಸವಿತಾ ಹೇಳಿದರು.

‘ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದಲೂ ಆಸ್ಪತ್ರೆಗೆ ರೋಗಿಗಳು ಬರುತ್ತಾರೆ. ಹದಿಹರೆಯದ ಗರ್ಭಧಾರಣೆ ಪ್ರಕರಣಗಳಲ್ಲಿ ಶೇ 75ರಿಂದ ಶೇ 80ರಷ್ಟು ಮಂದಿ ಬೆಂಗಳೂರಿಗರೇ ಆಗಿದ್ದಾರೆ’ ಎಂದು ಸ್ತ್ರೀರೋಗ ತಜ್ಞೆ ಡಾ. ರಾಧಿಕಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.