ಗ್ಯಾಸ್‌ ಕಟರ್‌ನಿಂದ ಹುಂಡಿ ಕೊರೆದು ಕಳವು

7

ಗ್ಯಾಸ್‌ ಕಟರ್‌ನಿಂದ ಹುಂಡಿ ಕೊರೆದು ಕಳವು

Published:
Updated:
Deccan Herald

ಬೆಂಗಳೂರು: ರಾಜಗೋಪಾಲನಗರದ ಶನಿ ಮಹಾತ್ಮ ದೇವಸ್ಥಾನದ ಮೂರು ಹುಂಡಿಗಳನ್ನು ಗ್ಯಾಸ್‌ ಕಟರ್‌ನಿಂದ ಕೊರೆದಿರುವ ದುಷ್ಕರ್ಮಿಗಳು, ಅದರಲ್ಲಿದ್ದ ಹಣ ಕದ್ದೊಯ್ದಿದ್ದಾರೆ.

ಅಮವಾಸ್ಯೆ ಇದ್ದ ಭಾನುವಾರ ರಾತ್ರಿಯೇ ಈ ಘಟನೆ ನಡೆದಿದೆ. ಆ ಸಂಬಂಧ ದೇವಸ್ಥಾನದ ಅರ್ಚಕರು, ರಾಜಗೋಪಾಲನಗರ ಠಾಣೆಗೆ ದೂರು ನೀಡಿದ್ದಾರೆ.

‘ದೇವಸ್ಥಾನದ ಮೂರು ಕಡೆ ಕಾಣಿಕೆ ಹುಂಡಿಗಳನ್ನು ಇಡಲಾಗಿದೆ. ಮುಖ್ಯ ಬಾಗಿಲಿನ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಕೃತ್ಯ ಎಸಗಿದ್ದಾರೆ. ಹುಂಡಿಗಳಲ್ಲಿದ್ದ ಹಣವನ್ನು ಮೂರು ವರ್ಷದದಿಂದ‌ ಹೊರಗೆ ತೆಗೆದಿರಲಿಲ್ಲ. ಸುಮಾರು ₹10 ಲಕ್ಷ  ಹುಂಡಿಗಳಲ್ಲಿತ್ತು’ ಎಂದು ಅರ್ಚಕರು ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ಹೇಳಿದರು.

ಠಾಣೆ ಸಮೀಪದಲ್ಲೇ ದೇವಸ್ಥಾನ: ರಾಜಗೋಪಾಲನಗರ ಠಾಣೆಯಿಂದ 200 ಮೀ ಅಂತರದಲ್ಲೇ ದೇವಸ್ಥಾನವಿದ್ದು, ಅಲ್ಲಿಯೇ ಕಳ್ಳತನ ನಡೆದಿರುವುದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.

’ಕಳ್ಳರು, ರಾಜಾರೋಷವಾಗಿ ದೇವಸ್ಥಾನಕ್ಕೆ ನುಗ್ಗಿ ಹಣ ಕದ್ದಿದ್ದಾರೆ. ಅವರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು’ ಎಂದು ಸ್ಥಳಿಯರು ಒತ್ತಾಯಿಸಿದ್ದಾರೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !