ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದ್ದ ಚಿನ್ನಾಭರಣ ಕಸದ ಬುಟ್ಟಿಗೆ ಎಸೆದಿದ್ದ ಆರೋಪಿ

Last Updated 7 ಜನವರಿ 2023, 21:09 IST
ಅಕ್ಷರ ಗಾತ್ರ

ಬೆಂಗಳೂರು: ರಾಮಮೂರ್ತಿನಗರ ಠಾಣೆ ವ್ಯಾಪ್ತಿಯ ಉದ್ಯಮಿಯೊಬ್ಬರ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿ ರಾಜೇಶ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

‘ವಿಜಿನಾಪುರದ ಮಂಜುನಾಥ ಬಡಾವಣೆಯ ಮಂಜುನಾಥ್ ಎಂಬು
ವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ಬಗ್ಗೆ ದಾಖಲಾದ ಪ್ರಕರಣದ ತನಿಖೆ ಕೈಗೊಂಡು ಆರೋಪಿ ರಾಜೇಶ್‌ನನ್ನು ಬಂಧಿಸಲಾಗಿದೆ. ಈತನಿಂದ ₹ 10 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾ
ಗಿದೆ’ ಎಂದು ಪೊಲೀಸರು ಹೇಳಿದರು.

‘ಮಂಜುನಾಥ್ ಅವರು ಮೊಮ್ಮಗಳ ನಾಮಕರಣ ಕಾರ್ಯಕ್ರಮಕ್ಕೆಂದು ಕುಟುಂಬ ಸಮೇತ 2022ರ ನ. 25ರಂದು ಹೊಸೂರಿಗೆ ಹೋಗಿದ್ದರು. ಮಗೆ ಬೀಗ ಹಾಕಿದ್ದರು. ಮನೆಯಲ್ಲಿ ಯಾರೂ ಇಲ್ಲವೆಂಬುದನ್ನು ತಿಳಿದುಕೊಂಡಿದ್ದ ಆರೋಪಿ, ಬಾಗಿಲು ಮೀಟಿ ಒಳನುಗ್ಗಿ, ₹ 10 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದುಕೊಂಡು ಪರಾರಿಯಾಗಿದ್ದ’ ಎಂದು ತಿಳಿಸಿದರು.

ನಕಲಿ ಚಿನ್ನವೆಂದು ಕಸದ ಬುಟ್ಟಿಗೆ:
‘ಚಿನ್ನಾಭರಣ ಸಮೇತ ಹೊಸೂರಿಗೆ
ಹೋಗಿದ್ದ ಆರೋಪಿ, ಮಳಿಗೆಯೊಂದ
ರಲ್ಲಿ ಮಾರಲು ಮುಂದಾಗಿದ್ದ. ಮಳಿಗೆ ಮಾಲೀಕ, ಚಿನ್ನಾಭರಣ ಖರೀದಿಸಲು ನಿರಾಕರಿಸಿದ್ದರು’ ಎಂದು ಹೇಳಿದರು.

‘ಚಿನ್ನಾಭರಣ ಮಾರಾಟವಾಗದ ಸಂಗತಿಯನ್ನು ಆರೋಪಿ ಸ್ನೇಹಿತನಿಗೆ ತಿಳಿಸಿದ್ದ. ಚಿನ್ನಾಭರಣ ನೋಡಿದ್ದ ಸ್ನೇಹಿತ, ‘ಇವು ಅಸಲಿ ಚಿನ್ನಾಭರಣವಲ್ಲ. ನಕಲಿ ಎಂಬಂತೆ ಕಾಣುತ್ತಿವೆ. ಅದಕ್ಕೆ ಮಳಿಗೆಯವರು ಖರೀದಿ ಮಾಡಿಲ್ಲ’ ಎಂದಿದ್ದರು. ಅಷ್ಟಕ್ಕೆ ಆರೋಪಿ, ಚಿನ್ನಾಭರಣವನ್ನು ರಸ್ತೆ ಬದಿಯ ಕಸದ ಬುಟ್ಟಿಗೆ ಎಸೆದು ಸ್ಥಳದಿಂದ ಹೊರಟು ಹೋಗಿದ್ದ’ ಎಂದು ತಿಳಿಸಿದರು.

‘ಆರೋಪಿ ಮಾಸ್ಕ್ ಧರಿಸಿ ಮನೆ
ಯೊಳಗೆ ನುಗ್ಗಿದ್ದ. ಕಳ್ಳತನ ಮಾಡಿ
ಕೊಂಡು ವಾಪಸು ಹೋಗುವಾಗ ಕ್ಯಾಮೆರಾ ಎದುರೇ ಮಾಸ್ಕ್‌ ತೆಗೆದಿದ್ದ. ಆತನ ಮುಖಚಹರೆ ಕ್ಯಾಮೆರಾ
ದಲ್ಲಿ ಸೆರೆಯಾಗಿತ್ತು. ಅದೇ ಸುಳಿವು ಆಧರಿಸಿ ಆತನ ವಿಳಾಸ ಪತ್ತೆ ಮಾಡಲಾ
ಗಿತ್ತು. ಆರೋಪಿಯನ್ನು ವಶಕ್ಕೆ ಪಡೆ
ದಾಗ, ಕಸದ ಬುಟ್ಟಿಯಲ್ಲಿ ಚಿನ್ನಾಭರಣ ಎಸೆದಿರುವುದಾಗಿ ಹೇಳಿದ್ದ. ಆತನನ್ನು
ಹೊಸೂರಿಗೆ ಕರೆದೊಯ್ದು ಪರಿಶೀಲಿಸಿ
ದಾಗ ಕಸದ ಬುಟ್ಟಿಯಲ್ಲಿ ಚಿನ್ನಾಭರಣ ‍ಪತ್ತೆಯಾಯಿತು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT