ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೊಸ ವಿವಿ ಬದಲು ಇರುವುದಕ್ಕೆ ಸೌಲಭ್ಯ ಕಲ್ಪಿಸಿ’–ಎಫ್‌ವಿಸಿಕೆ ಸಲಹೆ

Last Updated 14 ಮಾರ್ಚ್ 2021, 18:31 IST
ಅಕ್ಷರ ಗಾತ್ರ

ಬೆಂಗಳೂರು: ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಬದಲು ಈಗ ಅಸ್ತಿತ್ವದಲ್ಲಿರುವ ವಿಶ್ವವಿದ್ಯಾಲಯಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿ, ಸಿಬ್ಬಂದಿ ನೇಮಕ ಮಾಡಲು ರಾಜ್ಯಸರ್ಕಾರ ಮುಂದಾಗಬೇಕು ಎಂದು ದಿ ಫೋರಂ ಆಫ್‌ ಫಾರ್ಮರ್‌ ವೈಸ್‌ ಚಾನ್ಸಲರ್ಸ್‌ ಆಫ್‌ ಕರ್ನಾಟಕ (ಎಫ್‌ವಿಸಿಕೆ) ಸಲಹೆ ನೀಡಿದೆ.

‘ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದಾಗಿ ಸರ್ಕಾರ ಘೋಷಿಸಿದೆ. ಆದರೆ, ಈಗಿರುವ ವಿಶ್ವವಿದ್ಯಾಲಯಗಳೇ ಅಗತ್ಯ ಮೂಲಸೌಲಭ್ಯಗಳಿಲ್ಲದೆ, ಸಾಕಷ್ಟು ಅನುದಾನವಿಲ್ಲದೆ ನರಳುತ್ತಿವೆ. ಅವುಗಳ ಸುಧಾರಣೆಗೆ ಮೊದಲು ಕ್ರಮ ತೆಗೆದುಕೊಳ್ಳಬೇಕು’ ಎಂದು ವಿಶ್ರಾಂತ ಕುಲಪತಿಗಳು ಒತ್ತಾಯಿಸಿದ್ದಾರೆ.

‘ಈಗಿರುವ ಬಹುತೇಕ ಸ್ನಾತಕೋತ್ತರ ಪದವಿ ಸ್ವಾಯತ್ತ ಕಾಲೇಜುಗಳು ವಿಶ್ವವಿದ್ಯಾಲಯಗಳಂತೆ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿವೆ. ಅಲ್ಲದೆ, ಈಗ 32 ರಾಜ್ಯ ವಿಶ್ವವಿದ್ಯಾಲಯಗಳು, 14 ಡೀಮ್ಡ್‌, 17 ಖಾಸಗಿ ಹಾಗೂ ಒಂದು ಮುಕ್ತ ವಿಶ್ವವಿದ್ಯಾಲಯವಿದೆ. ಇದರ ಜೊತೆಗೆ, ಐಐಎಸ್‌ಸಿ, ನಿಮ್ಹಾನ್ಸ್‌ನಂತಹ ರಾಷ್ಟ್ರೀಯ ಸಂಸ್ಥೆಗಳು ಕೂಡ ವಿಶ್ವವಿದ್ಯಾಲಯಗಳ ಪಾತ್ರವನ್ನು ನಿರ್ವಹಿಸುತ್ತಿವೆ’ ಎಂದು ಎಫ್‌ವಿಸಿಕೆ ಪ್ರಕಟಣೆಯಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT