ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಶವಾಹಿ ವೀಕ್ಷಣೆಗೆ ನೂತನ ತಂತ್ರಜ್ಞಾನ

Last Updated 11 ಜೂನ್ 2018, 13:12 IST
ಅಕ್ಷರ ಗಾತ್ರ

ಲಾಸ್‌ಏಂಜಲೀಸ್ (ಪಿಟಿಐ): ಏಕಕಾಲಕ್ಕೆ 10,421 ವಂಶವಾಹಿಗಳನ್ನು ವೀಕ್ಷಿಸಲು ಸಾಧ್ಯವಾಗುವ ನೂತನ ತಂತ್ರಜ್ಞಾನವನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಅಂದರೆ, ಸಸ್ತನಿಗಳ ಒಂದು ಜೀವಕೋಶದಲ್ಲಿರುವ ಸುಮಾರು ಅರ್ಧದಷ್ಟು ವಂಶವಾಹಿಗಳನ್ನು ಒಂದೇ ಬಾರಿಗೆ ವೀಕ್ಷಿಸಬಹುದಾಗಿದೆ.

seqFISH (ಇಂಟ್ರಾನ್ ಸೀಕ್ವೆನ್ಷಿಯಲ್ ಫ್ಲೊರೊಸೆನ್ಸ್ ಇನ್ ಹೈಬ್ರಿಡೈಸೇಷನ್) ಎನ್ನುವ ಈ ತಂತ್ರಜ್ಞಾನದಿಂದ, ನೂರಾರು ಜೀವಕೋಶಗಳಲ್ಲಿರುವ ವಂಶವಾಹಿ ಗುಚ್ಛಗಳಲ್ಲಿ ಏನೆಲ್ಲಾ ಪ್ರಕ್ರಿಯೆಗಳು ನಡೆಯುತ್ತಿವೆ ಎನ್ನುವುದನ್ನು ಏಕಕಾಲಕ್ಕೆ ತಿಳಿಯಲು ಸಾಧ್ಯವಾಗುತ್ತದೆ.

‘ಯಾವುದೇ ಜೀವಕೋಶಕ್ಕೂ ಈ ತಂತ್ರಜ್ಞಾನ ಅನ್ವಯಿಸಬಹುದು’ ಎಂದು ಅಮೆರಿಕದ ಕ್ಯಾಲಿಫೋರ್ನಿಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧನಾ ತಜ್ಞ ಲಾಂಗ್ ಕಾಯ್ ತಿಳಿಸಿದ್ದಾರೆ.

‘ಜೀವಕೋಶಗಳ ವಿಧ, ಅವುಗಳ ಚಟುವಟಿಕೆ ಮಾತ್ರವ‌ಲ್ಲದೆ ಒಳಗಿರುವ ವರ್ಣತಂತು ರಚನೆಗಳನ್ನೂ ಗುರುತಿಸಲು ಈ ತಂತ್ರಜ್ಞಾನ ಸಹಾಯ ಮಾಡುತ್ತದೆ’ ಎಂದು ಅವರು ಹೇಳಿದ್ದಾರೆ.

ಈ ಮೊದಲು ವಿಜ್ಞಾನಿಗಳು ಸೂಕ್ಷ್ಮದರ್ಶಕ ಯಂತ್ರದ ಮೂಲಕ ಒಂದು ಬಾರಿಗೆ ಕೇವಲ ನಾಲ್ಕರಿಂದ ಐದು ವಂಶವಾಹಿಗಳನ್ನಷ್ಟೇ ವೀಕ್ಷಿಸಲು ಸಾಧ್ಯವಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT