ರಂಗ ತರಬೇತಿ ಶಿಬಿರ

7

ರಂಗ ತರಬೇತಿ ಶಿಬಿರ

Published:
Updated:

ಬೆಂಗಳೂರು: ‘ಸಮಾಜದಲ್ಲಿರುವ ದೌರ್ಬಲ್ಯ ಹಾಗೂ ದಬ್ಬಾಳಿಕೆಯನ್ನು ಘೋಷಣೆ ಹಾಗೂ ಧರಣಿಮುಕ್ತವಾಗಿ ಪ್ರತಿಭಟಿಸುವ ವೇದಿಕೆಯೇ ರಂಗಭೂಮಿ’ ಎಂದು ರಾಜ್ಯ ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್ ಅಭಿಪ್ರಾಯಪಟ್ಟರು.

ನೆಲಮಂಗಲದ ರಂಗ ಶಿಕ್ಷಣ ಕೇಂದ್ರದಲ್ಲಿ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ ರಂಗ ತರಬೇತಿ ಶಿಬಿರ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರಂಗಭೂಮಿ ಸಮಾಜದ ಕನ್ನಡಿ ಇದ್ದಂತೆ. ವಿಭಿನ್ನವಾದ ಪಾತ್ರಗಳ ಮೂಲಕ ಲೇಖಕರ ಹಾಗೂ ನಿರ್ದೇಶಕರ ಆಶಯಗಳನ್ನು ಜನರ ಮುಂದೆ ಇಡುವ ಮಾಧ್ಯಮ ಇದಾಗಿದೆ. ಇಂಥ ರಂಗಭೂಮಿ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕು. ಅದರಿಂದಾಗಿ ಅವರ ಆತ್ಮಸ್ಥೈರ್ಯ ಇಮ್ಮಡಿಯಾಗುತ್ತದೆ’ ಎಂದರು.

ಶಶಿಕಾಂತ್ ಯಡಹಳ್ಳಿ, ‘ಆಧುನಿಕತೆಯ ಪ್ರಭಾವದ ನಡುವೆಯೇ ಗ್ರಾಮೀಣ ಭಾಗದಲ್ಲಿ ಇಂದಿಗೂ ಸಾಂಸ್ಕೃತಿಕ ಪ್ರಜ್ಞೆ ಉಳಿದಿದೆ. ಆದರೆ, ಕಲೆ ಹಾಗೂ ಕಲಾವಿದರನ್ನು ಉಳಿಸಿಕೊಳ್ಳುವ ವಾತಾವರಣ ಗ್ರಾಮೀಣ ಪ್ರದೇಶದಲ್ಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ರಂಗಭೂಮಿ ಪ್ರಾಧಿಕಾರ ನಿರ್ಮಾಣವಾಗಬೇಕು. ಜಿಲ್ಲಾ ಮಟ್ಟದಲ್ಲಿರುವ ರಂಗಮಂದಿರಗಳು ಕಡಿಮೆ ಬಾಡಿಗೆಯಲ್ಲಿ ಕಲಾವಿದರಿಗೆ ಸಿಗುವಂತಾಗಬೇಕು’ ಎಂದು ಅವರು ಒತ್ತಾಯಿಸಿದರು.

ಅಕಾಡೆಮಿ ಸದಸ್ಯ ರಾಮಕೃಷ್ಣ ಬೆಳ್ತೂರು, ರಂಗ ಶಿಕ್ಷಣ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿ.ಸಿದ್ಧರಾಜು, ವ್ಯವಸ್ಥಾಪಕ ನಿರ್ದೇಶಕಿ ಮಂಜುಳಾ, ಶಿಬಿರದ ನಿರ್ದೇಶಕಿ ಡಾ. ಪುಷ್ಪಲತಾ, ಸಹ ನಿರ್ದೇಶಕ ವಿ.ದೇವರಾಜು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !