ಮಂಗಳವಾರ, ಫೆಬ್ರವರಿ 18, 2020
24 °C
ವಾಟ್ಸ್‌ಆ್ಯಪ್‌ ವಿಡಿಯೊ ಕರೆ ಮಾಡಿ ಸೂಚನೆ: ಬಂಧನ

ಉಡುಗೊರೆ ನೀಡಲು ಕಳ್ಳತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತಡರಾತ್ರಿ ಅಂಗಡಿಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಾಗವಾರದ ಸೈಯದ್ ಮಹಮ್ಮದ್ ಫೈಸಲ್‌ (23) ಮತ್ತು ದೊಡ್ಡಬೆಟ್ಟಹಳ್ಳಿ ನಿವಾಸಿ ಮಹಮ್ಮದ್ ಮೋಸಿನ್ (30) ಬಂಧಿತರು. ಅವರಿಂದ ₹6.50 ಲಕ್ಷ ಮೌಲ್ಯದ ವಿವಿಧ ಕಂಪನಿ ಕೈ ಗಡಿಯಾರ, ಕಾಸ್ಮೆಟಿಕ್ ಸಾಮಗ್ರಿ ಹಾಗೂ ಬೆಲೆ ಬಾಳುವ ಸಿಗರೇಟ್ ಪೊಟ್ಟಣಗಳನ್ನು ಜಪ್ತಿ ಮಾಡಲಾಗಿದೆ.

‘ಲೈವ್ ಬ್ಯಾಂಡ್‌ಗೆ ಹೋಗುತ್ತಿದ್ದ ಆರೋಪಿ ಫೈಸಲ್, ಅಲ್ಲಿಯೇ ಹುಡುಗಿಯರನ್ನು ಪರಿಚಯ ಮಾಡಿಕೊಂಡಿದ್ದ. ಹೋದಾಗಲೆಲ್ಲ ಉಡುಗೊರೆ ಕೊಟ್ಟು ಸಲುಗೆ ಬೆಳೆಸಿಕೊಂಡಿದ್ದ. ಆರಂಭದಲ್ಲಿ ದುಡಿದ ಹಣದಲ್ಲಿ ಉಡುಗೊರೆ ನೀಡುತ್ತಿದ್ದ. ಅದು ಖಾಲಿಯಾಗುತ್ತಿದ್ದಂತೆ ಕಳ್ಳತನಕ್ಕೆ ಇಳಿದಿದ್ದ. ಅದಕ್ಕೆ ಇನ್ನೊಬ್ಬ ಆರೋಪಿ ಮೋಸಿನ್ ಕೂಡಾ ಸಾಥ್ ನೀಡಿದ್ದ’ ಎಂದು ಪೊಲೀಸರು ಹೇಳಿದರು.

‘ಅಂಗಡಿಗಳಿಗೆ ತಡರಾತ್ರಿ ನುಗ್ಗುತ್ತಿದ್ದ ಆರೋಪಿ, ಅಂಗಡಿಯಲ್ಲಿ ಸಿಕ್ಕ ವಸ್ತುಗಳೆಲ್ಲವನ್ನೂ ಕದ್ದೊಯ್ಯುತ್ತಿದ್ದ‍ ಅಶೋಕನಗರ, ವೈಯಾಲಿಕಾವಲ್, ವಿಲ್ಸನ್‍ ಗಾರ್ಡನ್, ಸಂಪಂಗಿ ರಾಮನಗರ, ಕಬ್ಬನ್‍ಪಾರ್ಕ್ ಹಾಗೂ ಇಂದಿರಾನಗರ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳು ಕಳ್ಳತನ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ. ಆರೋಪಿ ಫೈಸಲ್‌ ಬಸವನಗುಡಿ, ಮಾಗಡಿ ರಸ್ತೆ ಹಾಗೂ ಹೈಗ್ರೌಂಡ್ಸ್ ಠಾಣೆ ವ್ಯಾಪ್ತಿಯಲ್ಲೂ ಈ ಹಿಂದೆ ಕಳ್ಳತನ ಎಸಗಿ ಸಿಕ್ಕಿಬಿದ್ದಿದ್ದ. ಜೈಲಿಗೂ ಹೋಗಿ ಬಂದಿದ್ದ’ ಎಂದು ಪೊಲೀಸರು ಹೇಳಿದರು. 

ವಾಟ್ಸ್‌ಆ್ಯಪ್‌ ವಿಡಿಯೊ ಕರೆ: ‘ಇಬ್ಬರೂ ಆರೋಪಿಗಳು ವ್ಯವಸ್ಥಿತ ಸಂಚು ರೂಪಿಸಿ ಕಳ್ಳತನ ಮಾಡುತ್ತಿದ್ದರು. ಆರೋಪಿ ಮೋಸಿನ್, ನಗರದಲ್ಲಿ ಜನರ ಓಡಾಟ ಕಡಿಮೆ ಇರುವ ಪ್ರದೇಶಗಳ ಅಂಗಡಿಗಳನ್ನು ಗುರುತು ಮಾಡುತ್ತಿದ್ದ. ಗ್ರಾಹಕರ ನೆಪದಲ್ಲಿ ಅಂಗಡಿಗೆ ಹೋಗಿ, ಅಲ್ಲಿ ಏನೆಲ್ಲ ಇದೆ ಎಂಬ ಬಗ್ಗೆ ತಿಳಿದುಕೊಳ್ಳುತ್ತಿದ್ದ’ ಎಂದರು.

‘ಅದೇ ಅಂಗಡಿಗಳಿಗೆ ತಡರಾತ್ರಿ ಫೈಸಲ್‌ ನುಗ್ಗುತ್ತಿದ್ದ. ಹಲವು ಬಾರಿ ಮನೆಯಲ್ಲೇ ಕುಳಿತಿರುತ್ತಿದ್ದ ಮೋಸಿನ್, ಫೈಸಲ್‌ಗೆ ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೊ ಕರೆ ಮಾಡಿ ಕಳ್ಳತನಕ್ಕೆ ಸೂಚನೆ ನೀಡುತ್ತಿದ್ದ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು