ವಾಸ್ತುಶಿಲ್ಪಿ ಮನೆಯಲ್ಲಿ ₹ 20 ಲಕ್ಷ ಕಳವು

7

ವಾಸ್ತುಶಿಲ್ಪಿ ಮನೆಯಲ್ಲಿ ₹ 20 ಲಕ್ಷ ಕಳವು

Published:
Updated:

ಬೆಂಗಳೂರು: ರಾಜಾಜಿನಗರ 3ನೇ ಬ್ಲಾಕ್ 17ನೇ ಅಡ್ಡರಸ್ತೆಯಲ್ಲಿರುವ ವಾಸ್ತುಶಿಲ್ಪಿ ಶಿವಾನಂದ್ ಮನೆಯಲ್ಲಿ ಕಳ್ಳರು  ₹ 20 ಲಕ್ಷ ನಗದು ಹಾಗೂ 150 ಗ್ರಾಂ ಚಿನ್ನಾಭರಣ ದೋಚಿದ್ದಾರೆ.

ಕಟ್ಟಡದ ನೆಲಮಹಡಿಯ ಮನೆಯಲ್ಲಿ ಪತ್ನಿ ಜತೆ ನೆಲೆಸಿರುವ ಶಿವಾನಂದ್, ಮೊದಲ ಹಾಗೂ ಎರಡನೇ ಮಹಡಿಯನ್ನು ಕಚೇರಿಗಳನ್ನಾಗಿ ಮಾಡಿಕೊಂಡಿದ್ದಾರೆ. ಶನಿವಾರ ಬೆಳಿಗ್ಗೆ ಅವರು ಪತ್ನಿ ಜತೆ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗಿದ್ದರು. ಆ ರಾತ್ರಿ ಚಾಮರಾಜನಗರದಲ್ಲೇ ಉಳಿದು, ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಮನೆಗೆ ವಾಪಸಾದಾಗ ಕಳುವು ಪ್ರಕರಣ ಬೆಳಕಿಗೆ ಬಂದಿದೆ.

ಹಿಂಬಾಗಿಲು ಮುರಿದು ಮನೆಗೆ ನುಗ್ಗಿರುವ ದುಷ್ಕರ್ಮಿಗಳು, ಹಾರೆಯಿಂದ ಅಲ್ಮೆರಾದ ಬಾಗಿಲು ಮೀಟಿ ನಗ–ನಾಣ್ಯ ದೋಚಿದ್ದಾರೆ. ಮನೆಯಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾಗಳಿಲ್ಲ. ಆ ರಸ್ತೆಯ ಎಲ್ಲ ಕ್ಯಾಮೆರಾಗಳನ್ನೂ ಪರಿಶೀಲಿಸುತ್ತಿದ್ದೇವೆ. ಭಾನುವಾರ ನಸುಕಿನಲ್ಲಿ ಕಳ್ಳತನ ನಡೆದಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ರಾಜಾಜಿನಗರ ಪೊಲೀಸರು ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !