ಬೆಂಗಳೂರು: ಸನ್ನಡತೆ ಆಧಾರದ ಮೇಲೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ 13 ಸಜಾಬಂದಿಗಳನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದಂತೆ ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 31 ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಅವಧಿಪೂರ್ವ ಬಿಡುಗಡೆಗೆ ಸರ್ಕಾರ ಆದೇಶಿಸಿತ್ತು.

ಕಾರಾಗೃಹಗಳ ಸಲಹಾ ಮಂಡಳಿ ಸಭೆಯ ತೀರ್ಮಾನದಂತೆ ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ 54 ಮಂದಿ ಜೀವಾವಧಿ ಶಿಕ್ಷೆ ಬಂದಿಗಳನ್ನು ಅವಧಿ ಪೂರ್ವ ಬಿಡುಗಡೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆ ಪೈಕಿ 31 ಮಂದಿಯ ಬಿಡುಗಡೆಗೆ ರಾಜ್ಯಪಾಲ ಅನುಮೋದನೆ ನೀಡಿದ್ದರು.

‘ಕೋಪದ ಕೈಗೆ ಬುದ್ಧಿ ಕೊಟ್ಟು ಕಾರಾಗೃಹದಲ್ಲಿ ನರಕಯಾತನೆ ಅನುಭವಿಸಿದ್ದೇವೆ. ಮಕ್ಕಳನ್ನು ಬಿಟ್ಟು ಬದುಕುವುದು ನರಕಕ್ಕಿಂತಲೂ ಕಡೆ. ಊಟ ಹಾಗೂ ವಸತಿ ವ್ಯವಸ್ಥೆ ಎಲ್ಲ ಇದ್ದರೂ ನೆಮ್ಮದಿ ಇರಲಿಲ್ಲ. ಯಾರೂ ಸಹ ಆತುರದಿಂದ ಅಪರಾಧ ಕೃತ್ಯ ಎಸಗಬಾರದು. ಕೋಪ ಬಂದಾಗ ತಾಳ್ಮೆಯಿಂದ ವರ್ತಿಸಿ’ ಎಂದು ಬಿಡುಗಡೆಯಾದವರು ಹೇಳಿದರು.

‘ಜೈಲಿನಲ್ಲಿದ್ದರೆ ಜೀವನ ನರಕ. ಕೊಲೆ ಕೆಲವೇ ಸೆಕೆಂಡ್ನಲ್ಲಿ ನಡೆಯಿತು. ಆದರೆ, ನಾನು 13 ವರ್ಷ ಜೈಲಿನಲ್ಲಿ ಕಳೆದೆ’ ಎಂದು ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾದ ಲಿಂಗರಾಜು ಹೇಳಿದರು.

ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಮಾತನಾಡಿ, ‘ಸನ್ನಡತೆ ಆಧಾರದ ಮೇಲೆ ರಾಜ್ಯದ ಬೇರೆ ಬೇರೆ ಕಾರಾಗೃಹದಿಂದ ಕೈದಿಗಳು ಬಿಡುಗಡೆ ಆಗಿದ್ದಾರೆ. ಅದರಲ್ಲಿ ಹೆಚ್ಚಿನವರು ಕೊಲೆ ಪ್ರಕರಣಗಳಲ್ಲಿ ಭಾಗಿ ಆಗಿದ್ದರು. ಇದೀಗ ಒಳ್ಳೆಯ ನಡತೆ ತೋರಿದ ಪರಿಣಾಮ ಅವರನ್ನು ಬಿಡುಗಡೆ ಮಾಡಲಾಗಿದೆ’ ಎಂದು ಹೇಳಿದರು.

ಕೈದಿಗಳಿಗೆ ಡ್ರಗ್ಸ್ ತಪಾಸಣೆ

ಕಾರಾಗೃಹಗಳಿಗೆ ಪೂರೈಕೆ ಆಗುತ್ತಿರುವ ಡ್ರಗ್ಸ್ ಅನ್ನು ಸಂಪೂರ್ಣವಾಗಿ ತಡೆಗಟ್ಟಲು ಕಾರಾಗೃಹ ಹಾಗೂ ಸುಧಾರಣೆಗಳ ಸೇವಾ ಇಲಾಖೆ ಮುಂದಾಗಿದ್ದು ಎಲ್ಲಾ ಜೈಲುಗಳಲ್ಲಿ ಇರುವ ಎಲ್ಲ ಕೈದಿಗಳನ್ನು ಮಾದಕ ವಸ್ತು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಪರಪ್ಪನ ಅಗ್ರಹಾರದಲ್ಲಿ 4834 ಕೈದಿಗಳಿದ್ದಾರೆ. ಆ ಪೈಕಿ ಶೇ 10 ಕೈದಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯರ ನೆರವು ಪಡೆದು ಉಳಿದ ಕೈದಿಗಳನ್ನು ಹಂತಹಂತವಾಗಿ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಕಾರಾಗೃಹದ ಮೂಲಗಳು ತಿಳಿಸಿವೆ. ಪರೀಕ್ಷೆಯಲ್ಲಿ ಕೈದಿಗಳು ಮಾದಕ ವಸ್ತು ತೆಗೆದುಕೊಂಡಿರುವುದು ದೃಢಪಟ್ಟರೆ ತಕ್ಷಣವೇ ಅವರಿಗೆ ಕೌನ್ಸೆಲಿಂಗ್ ನಡೆಸಲಾಗುವುದು. ಡ್ರಗ್ಸ್ ವ್ಯಸನಿಗಳಾಗಿದ್ದರೆ ಅಂತಹವರನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡುವ ವ್ಯವಸ್ಥೆಯೂ ಮಾಡಲಾಗುವುದು ಎಂದು ಹೇಳಿವೆ. ‘ಸದ್ಯಕ್ಕೆ ಕ್ರಿಮಿನಲ್ ಪ್ರಕರಣ ದಾಖಲಿಸುವ ಆಲೋಚನೆ ಇಲ್ಲ. ಆರಂಭಿಕ ಹಂತದಲ್ಲಿ ಕೌನ್ಸೆಲಿಂಗ್ ಹಾಗೂ ಚಿಕಿತ್ಸೆ ನೀಡಲಾಗುವುದು’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.