ಗುರುವಾರ , ಅಕ್ಟೋಬರ್ 21, 2021
22 °C

ಟೈರ್ ಸ್ಫೋಟ: ಅಜ್ಜ– ಮೊಮ್ಮಗ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಾಬಸ್‌ಪೇಟೆ ಬಳಿಯ ಮೇಲ್ಸೇತುವೆಯಲ್ಲಿ ಭಾನುವಾರ ಟಾಟಾ ಸುಮೊ ವಾಹನದ ಟೈರ್ ಸ್ಫೋಟ
ಗೊಂಡು ಅಪಘಾತ ಸಂಭವಿಸಿದ್ದು, ಮೊಹಮ್ಮದ್ ಸಾಬ್ (65) ಹಾಗೂ ಅವರ ಮೊಮ್ಮಗ ಯೂಸೂಫ್ (7) ಮೃತಪಟ್ಟಿದ್ದಾರೆ.

ಟಾಟಾ ಸುಮೊದಲ್ಲಿದ್ದ 13 ಮಂದಿ ತೀವ್ರ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

‘ಮೊಹಮ್ಮದ್ ಸಾಬ್ ಅವರು ಕುಟುಂಬಸ್ಥರು ಹಾಗೂ ಪರಿಚಯಸ್ಥರ ಜೊತೆ ಕಾರ್ಯಕ್ರಮ ನಿಮಿತ್ತ ಬೆಂಗಳೂರಿನಿಂದ ಕೊಪ್ಪಳಕ್ಕೆ ತೆರಳುತ್ತಿದ್ದರು. ನೆಲಮಂಗಲ ಸಂಚಾರ ಠಾಣೆ ವ್ಯಾಪ್ತಿಗೆ ಬರುವ ದಾಬಸ್‌ಪೇಟೆಯ ಮೇಲ್ಸೇತುವೆ ಬಳಿ ವಾಹನದ ಟೈರ್‌ ಏಕಾಏಕಿ ಸ್ಫೋಟಗೊಂಡು, ವಾಹನ ಉರುಳಿಬಿತ್ತು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.