ವಿನಾಯಕೋತ್ಸವ–2024: ಬೆಳಿಗ್ಗೆ 9ಕ್ಕೆ ಗಣ ಹೋಮ, ಅನ್ನ ಸಂತರ್ಪಣೆ, ಸಂಜೆ 7ಕ್ಕೆ ವಿನಾಯಕನ ಮೆರವಣಿಗೆ ಮತ್ತು ವಿಸರ್ಜನೆ, ಆಯೋಜನೆ ಮತ್ತು ಸ್ಥಳ: ವಿನಾಯಕ ಮಿತ್ರ ಮಂಡಳಿ ರಸ್ತೆ, ಜಯನಗರ ಎಂಟನೇ ಬ್ಲಾಕ್
ಬಸವ ಸಭಾಂಗಣದ ಉದ್ಘಾಟನೆ, ಗೌರಿ ಗಣಪತಿ ಉತ್ಸವದ ಆಚರಣೆ: ಉದ್ಘಾಟನೆ: ಆರ್. ದೇವದಾಸ್, ಬಿ. ವೀರಪ್ಪ, ಅತಿಥಿಗಳು: ಎಸ್.ಆರ್. ಉಮಾಶಂಕರ್, ತುಷಾರ್ ಗಿರಿನಾಥ್, ಮುನೀಶ್ ಮೌದ್ಗಿಲ್, ಸುರಳ್ಕರ್ ವಿಕಾಸ್ ಕಿಶೋರ್, ಆಯೋಜನೆ: ಬೃಹತ್ ಬೆಂಗಳೂರು ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ, ಸ್ಥಳ: ನೌಕರರ ಭವನ, ಕೇಂದ್ರ ಕಚೇರಿ, ನರಸಿಂಹರಾಜ ಚೌಕ, ಬೆಳಿಗ್ಗೆ 9
39ನೇ ವರ್ಷದ ಮಿಲ್ಕ್ ಕಾಲೊನಿ ಗಣೇಶ ಹಬ್ಬ: ಬೆಳಿಗ್ಗೆ 10ಕ್ಕೆ ನವಗ್ರಹ ಹೋಮ, ಸಂಜೆ 7.30ಕ್ಕೆ ಗುರುರಾಜ್ ಹೊಸಕೋಟೆ ಅವರ ಸಂಗೀತ ಕಾರ್ಯಕ್ರಮ, ಆಯೋಜನೆ ಹಾಗೂ ಸ್ಥಳ: ಸ್ವಸ್ತಿಕ್ ಯುವಕರ ಸಂಘ, ಐದನೇ ಮುಖ್ಯ ರಸ್ತೆ, ಮಿಲ್ಕ್ ಕಾಲೊನಿ, ರಾಜಾಜಿನಗರ 2ನೇ ಹಂತ
ಕ್ಯಾರ್ಲೊಸ್ ಅಮೊರಿಮ್ ಅವರ ವ್ಯಂಗ್ಯ ಚಿತ್ರಗಳ ಪ್ರದರ್ಶನ: ಆಯೋಜನೆ: ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ, ಸ್ಥಳ: ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ, ಟ್ರಿನಿಟಿ ವೃತ್ತ, ಎಂ.ಜಿ. ರಸ್ತೆ, ಬೆಳಿಗ್ಗೆ 10
ಕಲಾಕೃತಿಗಳ ಪ್ರದರ್ಶನ: ಕಲಾವಿದ: ಅಮಿತಾಭ್ ಆಶೇಶ್, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ) ದೊಮ್ಮಲೂರು, ಬೆಳಿಗ್ಗೆ 11
‘ಭೌತವಿಜ್ಞಾನ ಕಲಿಕೆಯ ಅನುಭವವನ್ನು ಉತ್ಕೃಷ್ಟಗೊಳಿಸುವ’ ಕುರಿತು ಚರ್ಚೆ: ಭಾಗವಹಿಸುವವರು: ಪೌಲ್ ಜಿ. ಹೆವಿಟ್, ನಾರಾಯಣ ಮೂರ್ತಿ, ವಿನಯ್ ಕುಮಾರ್, ಆಯೋಜನೆ: ಪಿಯರ್ಸನ್ ಇಂಡಿಯಾ, ಸ್ಥಳ: ಇನ್ಫೊಸಿಸ್ ಸೈನ್ಸ್ ಫೌಂಡೇಷನ್, ಜಯನಗರ, ಸಂಜೆ 4.30
ಸಂಸ್ಥಾಪಕರ ದಿನಾಚರಣೆ, ‘ಸಾವಿತ್ರಮ್ಮ ಪ್ರೊ.ಎಂ.ವಿ. ಸೀತಾರಾಮಯ್ಯ ಸಾಹಿತ್ಯ ಪುರಸ್ಕಾರ’ ಪ್ರದಾನ: ಮಲ್ಲೇಪುರಂ ಜಿ. ವೆಂಕಟೇಶ್, ಪ್ರಶಸ್ತಿ ಪುರಸ್ಕೃತರು: ಎ.ವಿ. ನಾವಡ, ಅತಿಥಿ: ಪಿ.ವಿ. ನಾರಾಯಣ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ: ಬಿ.ಎಂ.ಶ್ರೀ ಪ್ರತಿಷ್ಠಾನ, ಸ್ಥಳ: ಎಂ.ವಿ.ಸೀ ಸಭಾಂಗಣ, ಬಿ.ಎಂ.ಶ್ರೀ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 5
ಬಿಆರೆಲ್ 78 ಅಭಿನಂದನೆ ‘ಕಾಣದ ಅಗಾಧತೆಗೆ ಮಣಿದು’ ದೃಶ್ಯಗೀತೆಯ ಬಿಡುಗಡೆ: ಅತಿಥಿಗಳು: ಎಸ್.ವಿ. ರಾಜೇಂದ್ರಸಿಂಗ್ ಬಾಬು, ನಾಗೇಂದ್ರ ಪ್ರಸಾದ್, ಜೋಗಿ, ಎನ್.ಎಸ್. ಶ್ರೀಧರಮೂರ್ತಿ, ಉಪಸ್ಥಿತಿ: ಹಂಸಲೇಖ, ಬಿ.ಆರ್. ಲಕ್ಷ್ಮಣರಾವ್, ಆಯೋಜನೆ: ಐದನಿ ಎಂಟರ್‌ಟೈನ್‌ಮೆಂಟ್, ಬಿಆರೆಲ್ ಗೆಳೆಯರ ಬಳಗ, ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5.30
‘ಬಾಬಾ ಕಾರಂತ’ ನಾಟಕ ಪ್ರದರ್ಶನ: ನಿರ್ದೇಶನ: ಟಿ.ಎಸ್. ನಾಗಾಭರಣ, ಆಯೋಜನೆ: ಸುವರ್ಣ ಬೆನಕ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 7.30
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.