ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದ್ದ ಚಿನ್ನ ಖರೀದಿ: ವ್ಯಾಪಾರಿ ಎಳೆದೊಯ್ದ ಪೊಲೀಸರು

Last Updated 6 ಫೆಬ್ರುವರಿ 2023, 5:35 IST
ಅಕ್ಷರ ಗಾತ್ರ

ಬೆಂಗಳೂರು: ಕಳ್ಳತನದ ಚಿನ್ನಾಭರಣ ಖರೀದಿಸಿದ್ದ ಆರೋಪದಡಿ ‘ಪೂಜಾ ಬ್ಯಾಂಕರ್ಸ್’ ಮಳಿಗೆ ಮಾಲೀಕ ಭವರ್ ಲಾಲ್ (51) ಅವರನ್ನು ಪೊಲೀಸರು ರಸ್ತೆಯಲ್ಲಿ ಎಳೆದೊಯ್ದು ಜೀಪಿಗೆ ಹತ್ತಿಸಿದ್ದು, ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ದೇವರಜೀವನಹಳ್ಳಿ (ಡಿ.ಜೆ.ಹಳ್ಳಿ) ಬಳಿಯ ಪಿಳ್ಳಪ್ಪ ಗಾರ್ಡನನ್‌ನಲ್ಲಿ ಸ್ಥಳೀಯ ನಿವಾಸಿ ಭವರ್ ಲಾಲ್ ‘ಪೂಜಾ ಬ್ಯಾಂಕರ್ಸ್’ ಮಳಿಗೆ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ಮಳಿಗೆಗೆ ಬಂದಿದ್ದ ವಿವೇಕನಗರ ಠಾಣೆ ಪೊಲೀಸರು, ಭವರ್‌ ಲಾಲ್‌ ಅವರನ್ನು ವಶಕ್ಕೆ ಪಡೆಯಲು ಮುಂದಾಗಿದ್ದರು’ ಎಂದು ಸ್ಥಳೀಯರು ಹೇಳಿದರು.

‘ತನ್ನದೇನೂ ತಪ್ಪಿಲ್ಲವೆಂದಿದ್ದ ಭವರ್ ಲಾಲ್ ಜೀಪು ಹತ್ತಲು ನಿರಾಕರಿಸಿದ್ದರು. ಅವರ ಕುಟುಂಬದವರು ಸಹ ಸ್ಥಳಕ್ಕೆ ಬಂದು, ಪೊಲೀಸರ ಜೊತೆ ವಾಗ್ವಾದ ನಡೆಸಿದ್ದರು. ಇದೇ ಸಂದರ್ಭದಲ್ಲೇ ಕೆಲ ಸಿಬ್ಬಂದಿ, ಭವರ್‌ ಲಾಲ್ ಅವರನ್ನು ಮಳಿಗೆಯಿಂದ ಹೊರಗೆ ಎಳೆದೊಯ್ದು ಜೀಪಿನಲ್ಲಿ ಕೂರಿಸಿದ್ದರು. ನಂತರ, ಠಾಣೆಗೆ ಕರೆದೊಯ್ದರು’ ಎಂದು ತಿಳಿಸಿದರು.

‘51 ವರ್ಷ ವಯಸ್ಸಿನ ಭವರ್‌ ಲಾಲ್‌ ಜೊತೆ ಪೊಲೀಸರು ಅಮಾನವೀಯನವಾಗಿ ವರ್ತಿಸಿದ್ದಾರೆ. ರಸ್ತೆಯಲ್ಲಿ ಎಳೆದೊಯ್ದಿದ್ದಾರೆ. ಈ ವರ್ತನೆ ಖಂಡನೀಯ’ ಎಂದು ಸ್ಥಳೀಯರು ಕಿಡಿಕಾಡಿದರು.

ನೋಟಿಸ್ ನೀಡಿದರೂ ವಿಚಾರಣೆಗೆ ಗೈರು: ‘ನಗರದ ಎಂಟು ಮನೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪದಡಿ ಶ್ರೀನಿವಾಸ್ ಅಲಿಯಾಸ್ ಅಪ್ಪು ಎಂಬಾತನನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಇದೇ ಆರೋಪಿ, 100 ಗ್ರಾಂ ಚಿನ್ನ ಹಾಗೂ 350 ಗ್ರಾಂ ಬೆಳ್ಳಿ ಸಾಮಗ್ರಿಯನ್ನು
ಭವರ್ ಲಾಲ್‌ಗೆ ಮಾರಿದ್ದ. ಹೆಚ್ಚಿನ ಮಾಹಿತಿ ಕಲೆಹಾಕಲು ಭವರ್‌ಲಾಲ್‌ಗೆ ನೋಟಿಸ್‌ ನೀಡಲಾಗಿತ್ತು. ಆದರೆ, ಅವರು ಎರಡು ಬಾರಿ ವಿಚಾರಣೆಗೆ ಗೈರಾಗಿದ್ದರು’ ಎಂದು ವಿವೇಕನಗರ ಪೊಲೀಸರು ಹೇಳಿದರು.

‘ಕಳ್ಳತನದ ಚಿನ್ನಾಭರಣ ಜಪ್ತಿ ಮಾಡಬೇಕಿತ್ತು. ವಿಚಾರಣೆಗೆ ಗೈರಾಗಿದ್ದರಿಂದ ಭವರ್ ಲಾಲ್ ಅವರನ್ನು ವಶಕ್ಕೆ ಪಡೆ ಯಲು ಸಿಬ್ಬಂದಿ ಮಳಿಗೆ ಬಳಿ ಹೋಗಿದ್ದರು. ಪೊಲೀಸರ ಕರ್ತವ್ಯಕ್ಕೆ ಭವರ್‌ ಲಾಲ್ ಹಾಗೂ ಕುಟುಂಬದವರು ಅಡ್ಡಿಪಡಿಸಿದ್ದರು. ಅದರ ನಡುವೆಯೇ ಸಿಬ್ಬಂದಿ, ಭವರ್‌ಲಾಲ್ ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT