ನಿಯಮ ಉಲ್ಲಂಘನೆಗೆ ಇಲ್ಲಿ ’ಪೂರ್ಣ ಸಹನೆ’!

7

ನಿಯಮ ಉಲ್ಲಂಘನೆಗೆ ಇಲ್ಲಿ ’ಪೂರ್ಣ ಸಹನೆ’!

Published:
Updated:

ನಗರದ ಪ್ರಮುಖ ವೃತ್ತಗಳಲ್ಲಿ ಸಂಚಾರ ಉಲ್ಲಂಘನೆಗಳನ್ನು ತಹಬಂದಿಗೆ ತರುವ ಉದ್ದೇಶದಿಂದ ಬೆಂಗಳೂರು ಸಂಚಾರ ಪೊಲೀಸರು ‘ಶೂನ್ಯ ಸಹಿಷ್ಣತೆ ಜಂಕ್ಷನ್–ಜೀರೊ ಟಾಲರೆನ್ಸ್ ಜಂಕ್ಷನ್’ ಕಾರ್ಯಕ್ರಮವನ್ನು ಜಾರಿಗೆ ತಂದು ಈಗಾಗಲೇ ವರ್ಷ ಕಳೆದಿದೆ. ಈ ಜಂಕ್ಷನ್‌ಗಳಲ್ಲಿ ಆಗುವ ಸಂಚಾರ ನಿಯಮ ಉಲ್ಲಂಘನೆಗಳೆಲ್ಲವೂ ಕ್ಯಾಮೆರಾಗಳಲ್ಲಿ ದಾಖಲಾಗುತ್ತವೆ. ಅವುಗಳನ್ನು ಅಧರಿಸಿ ಅಂತಹ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಸಂಚಾರ ಪೊಲೀಸರು ಹೇಳಿದ್ದರು. ಪ್ರಕರಣ ದಾಖಲಿಸಿ, ದಂಡ ವಿಧಿಸುವುದರಲ್ಲಿ ಯಾವುದೇ ದಾಕ್ಷಿಣ್ಯ ಇಲ್ಲದಿರುವುದರಿಂದಲೇ ಇದು ‘ಜೀರೊ ಟಾಲರೆನ್ಸ್ ಜಂಕ್ಷನ್’ ಕಾರ್ಯಕ್ರಮ ಎಂಬುದು ಪೊಲೀಸರ ಘೋಷಣೆಯಾಗಿತ್ತು. 

ಈ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದ ಜಂಕ್ಷನ್‌ಗಳಲ್ಲಿ ಮಹಾತ್ಮ ಗಾಂಧಿ ರಸ್ತೆಯ ಕಾವೇರಿ ಎಂಪೋರಿಯಂ ಜಂಕ್ಷನ್ ಸಹ ಒಂದು. ಆದರೆ ಈ ಯೋಜನೆಯ ಕಾರಣಕ್ಕೆ ಈ ಜಂಕ್ಷನ್‌ನಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಕಡಿವಾಣ ಬಿದ್ದಿದೆಯೇ ಎಂಬ ಪ್ರಶ್ನೆಯನ್ನು ಇಟ್ಟುಕೊಂಡು ‘ಪ್ರಜಾವಾಣಿ’ ಸತತ ಮೂರು ದಿನ ‘ರಿಯಾಲಿಟಿ ಚೆಕ್’ ನಡೆಸಿತು. ಮೂರೂ ದಿನ ಬೇರೆ–ಬೇರೆ ಸಮಯದಲ್ಲಿ ಜಂಕ್ಷನ್‌ನಲ್ಲಿನ ಸಂಚಾರವನ್ನು ಪರಿಶೀಲಿಸಲಾಯಿತು. 

ಈ ಜಂಕ್ಷನ್‌ನಲ್ಲಿ ಎಲ್ಲಾ ಸ್ವರೂಪದ ಸಂಚಾರ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ. ಆದರೆ ಜೀಬ್ರಾ ಪಟ್ಟಿಯ ಮೇಲೆ ವಾಹನವನ್ನು ನಿಲ್ಲಿಸುವ ಮತ್ತು ‘ಯು’ ತಿರುವು ನಿಷೇಧದ ಉಲ್ಲಂಘನೆಗಳ ಸಂಖ್ಯೆಯೇ ಹೆಚ್ಚು. ಅವುಗಳ ಜತೆಯಲ್ಲಿ ನಿಲುಗಡೆ ನಿರ್ಬಂಧಿತ ಪ್ರದೇಶದಲ್ಲೂ ವಾಹನಗಳನ್ನು ನಿಲ್ಲಿಸಲಾಗುತ್ತಿದೆ.

 

ಮಹಾತ್ಮ ಗಾಂಧಿ ರಸ್ತೆ

ಬ್ರಿಗೇಡ್ ರಸ್ತೆ

ಕಾಮರಾಜ ರಸ್ತೆ

ಕಾವೇರಿ ಎಂಪೋರಿಯಂ

ಸೇನಾ ಕ್ಯಾಂಪಸ್

ಮಾಣಿಕ್ ಷಾ ಪೆರೇಡ್ ಮೈದಾನ

ಮೆಟ್ರೊ ನಿಲ್ದಾಣ

ಮೆಟ್ರೊ ಮಾರ್ಗ

ಕುಂಬ್ಳೆ ವೃತ್ತದ ಕಡೆಗೆ

ಮೇಯೊಹಾಲ್ ಕಡೆಗೆ

ನಿಷೇಧವಿದ್ದರೂ ‘ಯು’ ಟರ್ನ್‌ಗೆ ಅಡ್ಡಿಯಿಲ್ಲ

01.08.2018

ಮಧ್ಯಾಹ್ನ 1.40–1.50

10 ನಿಮಿಷ

10 ಯು ಟರ್ನ್ ಪಡೆದ ವಾಹನಗಳು

4 ನೋ ಪಾರ್ಕಿಂಗ್/ನೋ ಹಾಲ್ಟಿಂಗ್ ಪ್ರದೇಶದಲ್ಲಿ ನಿಲುಗಡೆಯಾಗಿದ್ದ ವಾಹನಗಳು

2 ವಿರುದ್ಧ ದಿಕ್ಕಿನಲ್ಲಿ ಸಾಗಿದ ವಾಹನಗಳು (ಅದರಲ್ಲಿ ಒಂದು ಪೊಲೀಸ್ ವಾಹನ)

 

02.08.2018

ಮಧ್ಯಾಹ್ನ 12.42–12.54

12 ನಿಮಿಷ

22 ಯು ಟರ್ನ್ ಪಡೆದ ವಾಹನಗಳು

8 ನೋ ಪಾರ್ಕಿಂಗ್/ನೋ ಹಾಲ್ಟಿಂಗ್ ಪ್ರದೇಶದಲ್ಲಿ ನಿಲುಗಡೆಯಾಗಿದ್ದ ವಾಹನಗಳು

7 ವಿರುದ್ಧ ದಿಕ್ಕಿನಲ್ಲಿ ಸಾಗಿದ ವಾಹನಗಳು

 

03.08.2018

ಬೆಳಿಗ್ಗೆ 11.08–11.30

22 ನಿಮಿಷ

14 ಜೀಬ್ರಾ ಪಟ್ಟಿಯ ಮೇಲೆ ನಿಂತಿದ್ದ ವಾಹನಗಳು

ಕಣ್ಣಿಗೆ ಕಂಡಿದ್ದು...

* ಇಲ್ಲಿ ಯು ತಿರುವು ಪಡೆಯುವುದನ್ನು ನಿಷೇಧಿಸಲಾಗಿದೆ. ಆದರೆ ಬಹುತೇಕ ಮಂದಿ ನಿಷೇಧವನ್ನು ಮೀರಿ ತಿರುವು ಪಡೆಯುತ್ತಾರೆ

* ಮೂರೂ ದಿನ ಇಲ್ಲಿ ಬಹುತೇಕ ಅದೇ ವಾಹನಗಳೇ ನಿಯಮವನ್ನು ಉಲ್ಲಂಘಿಸುತ್ತವೆ

* ಪೊಲೀಸರು ಮತ್ತು ಸಂಚಾರ ಪೊಲೀಸರೂ ಇಲ್ಲಿ ಯು ತಿರುವು ಪಡೆಯುತ್ತಾರೆ

* ದೊಡ್ಡ ಎಸ್‌ಯುವಿಗಳೂ ಇಲ್ಲಿ ಸುಲಭವಾಗಿ ತಿರುವು ಪಡೆಯುತ್ತವೆ. ಪರಿಶೀಲನೆ ವೇಳೆ ಸಣ್ಣ ಟಿಪ್ಪರ್‌ ಚಾಲಕನೊಬ್ಬ ನಿರಾಯಾಸವಾಗಿ ಯು ಟರ್ನ್ ಪಡೆದು ಸಾಗಿದ

* ಇದು ‘ನೋ ಪಾರ್ಕಿಂಗ್ ಮತ್ತು ನೋ ಹಾಲ್ಟಿಂಗ್’ ಪ್ರದೇಶ. ಅಂದರೆ ಇಲ್ಲಿ ಪಾರ್ಕಿಂಗ್ ಇರಲಿ, ವಾಹನವನ್ನು ನಿಲ್ಲಿಸುವಂತೆಯೂ ಇಲ್ಲ. ಆದರೆ ಇಲ್ಲಿ ಆಟೊ, ಸರಕು ಸಾಗಣೆ ವಾಹನ, ಕಾರು, ದ್ವಿಚಕ್ರ ವಾಹನಗಳನ್ನೂ ನಿಲುಗಡೆ ಮಾಡಲಾಗಿರುತ್ತದೆ

* ಎಷ್ಟೋ ವಾಹನಗಳು ಇಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತವೆ

* ಇಲ್ಲೂ ಜೀಬ್ರಾ ಪಟ್ಟಿಯ ಮೇಲೆ ವಾಹನಗಳನ್ನು ನಿಲ್ಲಿಸಲಾಗುತ್ತದೆ

ನಿಷೇಧಕ್ಕೆ ಸಂಚಾರ ಪೊಲೀಸರು ನೀಡುವ ಕಾರಣ

* ಇಲ್ಲಿ ಆಟೊಗಳು, ಕಾರುಗಳು ನಿಂತಿರುತ್ತವೆ. ಹೀಗಾಗಿ ತಿರುವು ಪಡೆಯಲು ಕಷ್ಟವಾಗುತ್ತದೆ

* ಬಹುತೇಕ ಮಂದಿಗೆ ‘ಡ್ರೈವಿಂಗ್’ ಸರಿಯಾಗಿ ಬರುವುದಿಲ್ಲ. ಹೀಗಾಗಿ ತಿರುವು ಪಡೆಯಲು ಹೆಣಗಾಡುತ್ತಾರೆ

* ಕಾರುಗಳು ಇಲ್ಲಿ ತಿರುವು ಪಡೆಯಲು ಸಾಲುಗಟ್ಟಿ ನಿಂತರೆ ಎದುರು ಹೋಗುವ ವಾಹನಗಳಿಗೆ ತೊಂದರೆಯಾಗುತ್ತದೆ

* ನಮ್ಮದು ಅಸೋಕನಗರ ಠಾಣೆ. ಆ ಜಾಗ ಕಬ್ಬನ್ ಪಾರ್ಕ್ ಸಂಚಾರ ಪೊಲಿಸ್ ಠಾಣೆ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ನಾವು ಆ ವಾಹನಗಳನ್ನು ಅಲ್ಲಿಂದ ತೆರವು ಮಾಡಿಸಲು ಅವಕಾಶವಿಲ್ಲ ಎನ್ನುತ್ತಾರೆ ಇಲ್ಲಿ ಕರ್ತವ್ಯದಲ್ಲಿರುವ ಪೊಲೀಸರು

ಉಲ್ಲಂಘಿಸುವವರ ಸಬೂಬು

* ಇಲ್ಲಿ ಯು ಟರ್ನ್ ನಿಷೇಧಿಸುವುದು ಸಂಪೂರ್ಣ ಅವೈಜ್ಞಾನಿಕ. ಕಾರುಗಳೂ ತಿರುವು ಪಡೆಯವಷ್ಟು ರಸ್ತೆ ವಿಶಾಲವಾಗಿದೆ. ಆದರೆ ಅಲ್ಲಿ ಆಟೊಗಳು–ಕಾರುಗಳು ನಿಂತಿರುವುದರಿಂದ ಟರ್ನ್ ಮಾಡುವುದಕ್ಕೆ ಆಗುವುದಿಲ್ಲ. ಅವುಗಳನ್ನು ಅಲ್ಲಿಂದ ತೆರವು ಮಾಡುವುದನ್ನು ಬಿಟ್ಟು, ಯು ಟರ್ನ ನಿಷೇಧಿಸದರೆ ಹೇಗೆ?

* ಯು ಟರ್ನ್ ಪಡೆಯಲು ಜಾಗವಿದ್ದರೂ ನಿಷೇಧಿಸಲಾಗಿದೆ. ಕುಂಬ್ಳೆ ವೃತ್ತದ ಕಡೆಗೆ ವಾಪಸ್ ಹೋಗಲು ಕಾಮರಾಜ ರಸ್ತೆಗೆ ಹೋಗಿಬರಬೇಕು ಅಥವಾ ಮೇಯೊಹಾಲ್ ಕಡೆಗೆ ಹೋಗಿ ವಾಪಸ್ ಬರಬೇಕು. ಇದರಿಂದ ಸಮಯ ಮತ್ತು ಪೆಟ್ರೋಲ್ ಹಾಳು. ಹೆಚ್ಚು ದೂರ ಹೋಗುವುದರಿಂದ ವಾಯುಮಾಲಿನ್ಯ ಹೆಚ್ಚುವುದಿಲ್ಲವೇ?

ಇಲ್ಲಿ ಪೊಲೀಸರ ಭಯ

* ಈ ಭಾಗದಲ್ಲಿ ಸಿಗ್ನಲ್ ಜಂಪ್ ಮತ್ತು ಜೀಬ್ರಾ ಪಟ್ಟಿಯ ಮೇಲೆ ವಾಹನ ನಿಲ್ಲಿಸುವವರ ಸಂಖ್ಯೆ ತೀರಾ ಕಡಿಮೆ ಇದೆ

* ಸಂಚಾರ ಪೊಲೀಸರು ಬ್ರಿಗೇಡ್ ರಸ್ತೆಯಲ್ಲಿ ನಿಂತಿರುವುದು ಚಾಲಕ/ಸವಾರರ ಕಣ್ಣಿಗೆ ಕಾಣುತ್ತದೆ. ಹೀಗಾಗಿ ಬಹುತೇಕ ಮಂದಿ ನಿಯಮಗಳನ್ನು ಪಾಲಿಸುತ್ತಾರೆ

2 ಜೀಬ್ರಾ ಪಟ್ಟಿಯ ಮೇಲೆ ನಿಂತಿದ್ದ ವಾಹನಗಳು

1 ಸಿಗ್ನಲ್ ಜಂಪ್ ಮಾಡಿದ ವಾಹನ

 

ಪಾದಚಾರಿಗಳೇ ಇಲ್ಲಿ ಎಚ್ಚರವಿರಲಿ

66 ಜೀಬ್ರಾ ಪಟ್ಟಿಯ ಮೇಲೆ ನಿಂತ ವಾಹನಗಳು

1 ಸಿಗ್ನಲ್ ಜಂಪ್ ಮಾಡಿದ ವಾಹನ

* ಇಲ್ಲಿ ಜೀಬ್ರಾ ಪಟ್ಟಿಯ ಮೇಲೆ ವಾಹನ ನಿಲ್ಲಿಸುವವರ ಸಂಖ್ಯೆ ವಿಪರೀತ ಹೆಚ್ಚು

* ಪಾದಚಾರಿಗಳು ರಸ್ತೆ ದಾಟಲು ಹಸರಿ ದೀಪ ಇದ್ದಾಗಲೂ ಇಲ್ಲಿ ವಾಹನಗಳು ಎಡ ತಿರುವು ಪಡೆಯುತ್ತವೆ. ಅಂತಹ ವಾಹನಗಳನ್ನು ತಡೆದು ಪ್ರಕರಣಗಳನ್ನು ದಾಖಲಿಸಲಾಗುತ್ತದೆ (ನಕ್ಷೆಗ: ಪೊಲೀಸರು ಇರುವ ಜಾಗ)

* ಜೀಬ್ರಾ ಪಟ್ಟಿಯ ಮೇಲೆ ವಾಹನ ನಿಲ್ಲಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರೆ, ಕೆಲವರು ವಾಹನವನ್ನು ಹಿಂದಕ್ಕೆ ಸರಿಸುತ್ತಾರೆ. ಕೆಲವರು ಸುಮ್ಮನೆ ನಿಂತೇ ಇರುತ್ತಾರೆ

* ಪಾದಚಾರಿಗಳು ರಸ್ತೆಗೆ ಇಳಿದು ದಾಟಬೇಕಾಗುತ್ತದೆ

* ಎಡ ತಿರುವಿನಲ್ಲಿ ವಾಹನಗಳು ಬರುವುದರಿಂದ ಪಾದಚಾರಿಗೆ ಆ ವಾಹನಗಳು ಕಾಣುವುದಿಲ್ಲ. ಚಾಲಕ/ಸವಾರರಿಗೂ ಪಾದಚಾರಿಗಳು ಕಾಣುವುದಿಲ್ಲ

* ಸಂಚಾರ ಪೊಲೀಸರೇ ಇಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನವನ್ನು ಚಲಾಯಿಸಿಕೊಂಡು ಬರುತ್ತಾರೆ

 

ಪೊಲೀಸರು ಹೇಳಿದ್ದು

* ಜನರಿಗೆ ದಂಡದ ಭಯ ಇಲ್ಲ ಮತ್ತು ಪಾದಚಾರಿಗಳಿಗೆ ತೊಂದರೆಯಾಗುತ್ತದೆ ಎಂಬ ಅರಿವಿಲ್ಲ

* ಅವೆಲ್ಲವೂ ಕ್ಯಾಮೆರಾಗಳಲ್ಲಿ ದಾಖಲಾಗುತ್ತವೆ. ಅವರಿಗೆ ದಂಡ ವಿಧಿಸಲಾಗುತ್ತದೆ

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !