ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ದಿನದಲ್ಲಿ ₹ 51.85 ಕೋಟಿ ದಂಡ ಸಂಗ್ರಹ

Last Updated 8 ಫೆಬ್ರುವರಿ 2023, 21:27 IST
ಅಕ್ಷರ ಗಾತ್ರ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಶೇ 50ರಷ್ಟು ರಿಯಾಯಿತಿ ಘೋಷಿಸಿದ್ದು, ಬೆಂಗಳೂರಿನಲ್ಲಿ ಒಟ್ಟು ಆರು ದಿನಗಳಲ್ಲಿ 18.26 ಲಕ್ಷ ಪ್ರಕರಣಗಳಲ್ಲಿ ಒಟ್ಟು ₹ 51.85 ಕೋಟಿ ದಂಡ ಸಂಗ್ರಹವಾಗಿದೆ.

ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿದ್ದ ಪ್ರಸ್ತಾವ ಒಪ್ಪಿದ್ದ ಸರ್ಕಾರವು, ಸಂಚಾರ ನಿಯಮ ಉಲ್ಲಂಘನೆಯ ಇ–ಚಲನ್ ಪ್ರಕರಣಗಳ ದಂಡ ಪಾವತಿ ಮೇಲೆ ರಿಯಾಯಿತಿ ನೀಡಿ ಆದೇಶ ಹೊರಡಿಸಿತ್ತು. ಫೆ. 3ರಿಂದ ದಂಡ ಸಂಗ್ರಹ ಪ್ರಕ್ರಿಯೆ ಆರಂಭವಾಗಿದೆ. ಫೆ.8ರ ವೇಳೆಗೆ ಒಟ್ಟು ₹ 51,85,40,531 ದಂಡ ಸಂಗ್ರಹವಾಗಿದೆ.

ಬುಧವಾರ (ಫೆ.8) ಪಿಡಿಎ ಮೂಲಕ 1.59 ಲಕ್ಷ ಪ್ರಕರಣಗಳಲ್ಲಿ ₹ 4.36 ಕೋಟಿ, ಪೇಟಿಎಂ ಮೂಲಕ 1.20 ಲಕ್ಷ ಪ್ರಕರಣಗಳಲ್ಲಿ ₹ 3.59 ಕೋಟಿ, ಸಂಚಾರ ನಿರ್ವಹಣಾ ಕೇಂದ್ರ (ಟಿಎಂಸಿ) ಮೂಲಕ 365 ಪ್ರಕರಣಗಳಲ್ಲಿ ₹ 85,450, ಬೆಂಗಳೂರು ಎನ್‌ ಮೂಲಕ 42,710 ಪ್ರಕರಣಗಳಲ್ಲಿ
₹ 1.9 ಕೋಟಿ ದಂಡ ಸಂಗ್ರಹವಾಗಿದೆ. ಬುಧವಾರ ಒಟ್ಟು 3,23,629 ಪ್ರಕರಣಗಳಲ್ಲಿ ₹ 9 ಕೋಟಿಯಷ್ಟು ದಂಡ ಪಾವತಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT