ಸೋಮವಾರ, ಸೆಪ್ಟೆಂಬರ್ 23, 2019
28 °C

‘ದಂಡ ಇಳಿಕೆ: ರಾಜ್ಯ ಸರ್ಕಾರಕ್ಕೆ ಗುಜರಾತ್‌ ಮಾದರಿಯಾಗಲಿ’

Published:
Updated:

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸುವವರಿಗೆ ವಿಧಿಸಲಾಗುವ ದಂಡದ ಮೊತ್ತವನ್ನು ಹೆಚ್ಚಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ಅದರನ್ವಯ ದೇಶದಾದ್ಯಂತ ದಂಡ ಸಂಗ್ರಹಿಸಲಾಗುತ್ತಿದೆ. ಇದರ ಮಧ್ಯೆಯೇ ಗುಜರಾತ್‌ ಸರ್ಕಾರ, ಕೆಲ ನಿಯಮಗಳ ದಂಡದ ಮೊತ್ತದ ಪ್ರಮಾಣವನ್ನು ಕಡಿಮೆ ಮಾಡಿದೆ.

ಹೆಲ್ಮೆಟ್ ಧರಿಸದಿದ್ದರೆ ವಿಧಿಸುವ ದಂಡದ ಮೊತ್ತವನ್ನು ₹1,000ದಿಂದ ₹ 500ಕ್ಕೆ ಇಳಿಸಲಾಗಿದೆ. ಪರವಾನಗಿ ಇಲ್ಲದೆ ವಾಹನ ಚಾಲನೆಗೆ ₹10,000 ಬದಲು ₹1,500 ನಿಗದಿ ಮಾಡಲಾಗಿದೆ. ಸೆಪ್ಟೆಂಬರ್ 16ರಿಂದ ಪರಿಷ್ಕೃತ ದಂಡ ಜಾರಿಗೆ ಬರಲಿದೆ. ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ತೆಗೆದುಕೊಂಡಿರುವ ಕ್ರಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆದಿದೆ. 

‘ಹೆಲ್ಮೆಟ್ ಧರಿಸದಿರುವುದು ಹಾಗೂ ಚಾಲನಾ ಪರವಾನಗಿಗೆ ಸಂಬಂಧಪಟ್ಟ ನಿಯಮಗಳ ಉಲ್ಲಂಘನೆ ಮೊತ್ತವನ್ನು ಗುಜರಾತ್ ಸರ್ಕಾರ ಕಡಿಮೆ ಮಾಡಿದೆ. ಕರ್ನಾಟಕದ ಸರ್ಕಾರವೇಕೆ ಮೌನವಾಗಿದೆ’ ಎಂದು ಜನ ಪ್ರಶ್ನಿಸುತ್ತಿದ್ದಾರೆ.

‘ಕೇಂದ್ರ ಸರ್ಕಾರದ ಆದೇಶವನ್ನು ಯಥಾಪ್ರಕಾರ ಜಾರಿಗೆ ತರಬೇಕೆಂಬ ನಿಯಮವೇನು ಇಲ್ಲ. ರಾಜ್ಯ ಸರ್ಕಾರ, ತನ್ನ ಜನರ ಹಿತದೃಷ್ಟಿಗೆ ತಕ್ಕಂತೆ ದಂಡದ ಮೊತ್ತವನ್ನು ಕಡಿಮೆ ಮಾಡುವ ಅಧಿಕಾರ ಹೊಂದಿದೆ’ ಎಂದೂ ಹೇಳಿದ್ದಾರೆ.

Post Comments (+)