ಸೋಮವಾರ, ನವೆಂಬರ್ 18, 2019
25 °C

ಯಶವಂತಪುರ ಇಂಟರ್‌ಸಿಟಿ ವಾಸ್ಕೊಡಗಾಮಾವರೆಗೆ ವಿಸ್ತರಣೆ

Published:
Updated:

ಹುಬ್ಬಳ್ಳಿ: ಯಶವಂತಪುರ–ಹರಿಹರ–ಯಶವಂತಪುರ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ವಾಸ್ಕೊಡ ಗಾಮಾವರೆಗೂ ವಿಸ್ತರಿಸಲಾಗಿದೆ.

ಯಶವಂತಪುರ ಹರಿಹರ ನಡುವೆ ವಾರದಲ್ಲಿ ಮೂರು ಬಾರಿ ಸಂಚರಿಸುತ್ತಿದ್ದ ಇಂಟರ್‌ಸಿಟಿ ರೈಲು ಇನ್ನು ಮುಂದೆ ಯಶವಂತಪುರ–ವಾಸ್ಕೊ ಡ ಗಾಮಾ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ:07309, 07310) ವಾರದಲ್ಲಿ ಐದು ದಿನ ಸಂಚರಿಸಲಿದೆ.

ನ.8ರಿಂದ ಯಶವಂತಪುರ– ವಾಸ್ಕೊ ಡ ಗಾಮಾ ರೈಲು ಯಶವಂತಪುರದಿಂದ ಮಧ್ಯಾಹ್ನ 2.30ಕ್ಕೆ ಹೊರಡಲಿದ್ದು, ಮರು ದಿನ ಸಂಜೆ 6ಕ್ಕೆ ವಾಸ್ಕೊ ಡ ಗಾಮಾ ತಲುಪಲಿದೆ. ಮಂಗಳವಾರ, ಭಾನುವಾರ ಹೊರತು ಪಡಿಸಿ ಉಳಿದ ಐದು ದಿನ ಸಂಚರಿಸಲಿದೆ.

ನ.10 ರಂದು ವಾಸ್ಕೊ ಡ ಗಾಮಾದಿಂದ ರಾತ್ರಿ 9.20ಕ್ಕೆ ಹೊರಡಲಿದ್ದು, ಮರುದಿನ ಯಶವಂತಪುರಕ್ಕೆ ಮಧ್ಯಾಹ್ನ 12.30ಕ್ಕೆ ತಲುಪಲಿದೆ. ರೈಲು ಸಂಚಾರ ವಿಸ್ತರಣೆ ಹಿನ್ನೆಲೆಯಲ್ಲಿ ನ.9 ರಿಂದ ಹುಬ್ಬಳ್ಳಿ–ಮೀರಜ್‌ ಲಿಂಕ್‌ ಎಕ್ಸ್‌ಪ್ರೆಸ್‌ (06948), ವಾಸ್ಕೊಡಗಾಮಾ–ಕೆಎಸ್‌ಆರ್‌ ಬೆಂಗಳೂರು (02779) ರೈಲು ಸಂಚಾರ ರದ್ದುಗೊಳಿಸಲಾಗಿದೆ.

 

ಪ್ರತಿಕ್ರಿಯಿಸಿ (+)