ಬೆಂಗಳೂರು: ಯಶವಂತಪುರ ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಒಂದು ತಿಂಗಳು ಪ್ಲಾಟ್‌ಫಾರ್ಮ್‌ಗಳನ್ನು ಬಂದ್ ಮಾಡಲಾಗಿದೆ. ಆರು ರೈಲುಗಳ ಸಂಚಾರ ರದ್ದು ಮಾಡಲಾಗಿದ್ದು, 8 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಮಂಗಳವಾರದಿಂದ (ಆಗಸ್ಟ್ 20) ಸೆಪ್ಟೆಂಬರ್ 19 ರವರೆಗೂ ಯಶವಂತಪುರ ನಿಲ್ದಾಣದ ಕಾಮಗಾರಿ ಕೈಗೊಂಡಿರುವ ಕಾರಣ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಆ.21 ರಿಂದ ಸೆ.4ರ ವರೆಗೆ 2, 3ನೇ ಪ್ಲಾಟ್‌ಫಾರ್ಮ್ ಹಾಗೂ ಸೆ.5 ರಿಂದ 19ರ ವರೆಗೆ 4, 5ನೇ ಪ್ಲಾಟ್‌ಫಾರ್ಮ್ ಬಂದ್ ಆಗಲಿವೆ ಎಂದು ನೈಋತ್ಯ ರೈಲ್ವೆ ವಲಯ ಪ್ರಕಟಣೆ ತಿಳಿಸಿದೆ.
ಭಾಗಶಃ ರದ್ದುಗೊ ಳಿಸಿದ್ದ ತುಮಕೂರು–ಯಶವಂತಪುರ (06580) ರೈಲು ಎಂದಿನಂತೆ ಯಶ ವಂತಪುರದವರೆಗೆ ಸಂಚರಿಸಲಿದೆ. ಬೆಳಿಗ್ಗೆ 10 ಗಂಟೆಗೆ ಬದಲಾಗಿ 9.24ಕ್ಕೆ ನಿಲ್ದಾಣ ತಲುಪಲಿದೆ. ಯಶವಂತಪುರ–ತುಮ ಕೂರು (06573) ರೈಲು ಯಶವಂತಪುರ ನಿಲ್ದಾಣದಿಂದ ಸಂಜೆ 7.50ಕ್ಕೆ ಹೊರಡಲಿದೆ. ಬೆಂಗಳೂರು–ಕುಪ್ಪಂ (06529) ರೈಲು ಕೃಷ್ಣರಾಜಪುರದಿಂದ ಮಧ್ಯಾಹ್ನ 12.17ಕ್ಕೆ ಹೊರಡಲಿದೆ.
ಯಶವಂತಪುರದಿಂದ ತುಮಕೂರಿಗೆ ಹಾಗೂ ತುಮಕೂರಿನಿಂದ ಯಶವಂತಪುರ ನಡುವೆ ಸಂಚರಿಸುವ ರೈಲುಗಳನ್ನು ರದ್ದುಪಡಿಸಲಾಗಿತ್ತು. ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ವಿಶೇಷ ಮುತುವರ್ಜಿ ವಹಿಸಿ ಈ ಎರಡು ರೈಲುಗಳು ಈ ಮೊದಲಿನಂತೆಯೇ ಸಂಚರಿಸಲು ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ರೈಲು ಸಂಚಾರ ರದ್ದು:
ಆ.21 ರಿಂದ 31 ಹಾಗೂ ಸೆ.1ರಿಂದ 19ರ ಅವಧಿಯಲ್ಲಿ ತುಮಕೂರು–ಕೆಎಸ್‌ಆರ್ ಬೆಂಗಳೂರು, ಕೆಎಸ್‌ಆರ್ ಬೆಂಗಳೂರು–ತುಮಕೂರು, ಸಿಕಂದರಾಬಾದ್–ಯಶವಂತಪುರ, ಯಶವಂತಪುರ–ಸಿಕಂದರಾಬಾದ್, ಯಶವಂತಪುರ–ಕೊಚುವೇಲಿ ಮಾರ್ಗಗಳಲ್ಲಿ ರೈಲು ಸಂಚಾರ ರದ್ದು ಮಾಡಲಾಗಿದೆ.
ಮಾರ್ಗ ಬದಲಾವಣೆ: ಆ. 24 ಮತ್ತು 31 ಹಾಗೂ ಸೆ.7 ಮತ್ತು 14 ರಂದು ಹುಬ್ಬಳ್ಳಿ- ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿ, ಅರಸೀಕೆರೆ, ಚಿಕ್ಕಬಾಣಾ ವರ, ಯಶವಂತಪುರ ‘ಎ’ ಕ್ಯಾಬಿನ್, ಲೊಟ್ಟೆಗೊಲ್ಲಹಳ್ಳಿ, ಬಾಣಸವಾಡಿ, ಕೃಷ್ಣರಾಜಪುರ ಮೂಲಕ ಸಂಚರಿಸುತ್ತದೆ.
ಆ. 21 ರಿಂದ ಸೆ. 19ರವರೆಗೆ ಬಾಣಸವಾಡಿ-ತುಮಕೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಬಾಣಸವಾಡಿ, ಯಶವಂತಪುರ ‘ಎ’ ಕ್ಯಾಬಿನ್, ಚಿಕ್ಕಬಾಣಾವರ ಮತ್ತು ತುಮಕೂರು ನಿಲ್ದಾಣಗಳ ಮೂಲಕ ಸಂಚರಿಸುತ್ತದೆ.
ಆ.20 ರಿಂದ ಸೆ.18ರವರೆಗೆ ವಾಸ್ಕೊಡಗಾಮ–ಯಶವಂತಪುರ ರೈಲು ತುಮಕೂರು, ಚಿಕ್ಕಬಾಣಾವರ, ಯಶ ವಂತಪುರ ‘ಎ’ ಕ್ಯಾಬಿನ್, ಲೊಟ್ಟೆಗೊಲ್ಲಹಳ್ಳಿ, ಹೆಬ್ಬಾಳ, ಬಾಣಸವಾಡಿ ಮೂಲಕ ಸಂಚರಿಸುತ್ತದೆ.
ಆ.20ರಿಂದ ಸೆ.18ರ ವರೆಗೆ ಸೊಲ್ಲಾಪುರ-ಹಾಸನ ಎಕ್ಸ್‌ಪ್ರೆಸ್ ರೈಲು ಯಲಹಂಕ, ಯಶವಂತಪುರ ‘ಎ’ ಕ್ಯಾಬಿನ್ ಮತ್ತು ಚಿಕ್ಕಬಾಣಾವರ ನಿಲ್ದಾಣಗಳ ಮೂಲಕ ಸಂಚರಿಸುತ್ತದೆ.
ಮಾರ್ಗ ಬದಲಾವಣೆಯ ಎಲ್ಲ ರೈಲುಗಳು ಯಶವಂತಪುರ ನಿಲ್ದಾಣದಲ್ಲಿ ನಿಲ್ಲುವುದಿಲ್ಲ.
ತುಮಕೂರಿನಲ್ಲಿ ವಂದೇ ಭಾರತ್ ನಿಲುಗಡೆ
ತುಮಕೂರಿನಲ್ಲಿ ಧಾರವಾಡ- ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಅನುಮೋದನೆ ನೀಡಲಾಗಿದೆ. ಸಚಿವ ವಿ.ಸೋಮಣ್ಣ ಅವರು ಆ.23ರಂದು ಸಂಜೆ 6.18 ಕ್ಕೆ ತುಮ ಕೂರಿನಲ್ಲಿ ನಿಲುಗಡೆಗೆ ಹಸಿರು ನಿಶಾನೆ ತೋರಲಿದ್ದಾರೆ. ಬಳಿಕ ಸಚಿ ವರು ಅದೇ ರೈಲಿನಲ್ಲಿ ಬೆಂಗಳೂರಿನವರೆಗೆ ಪ್ರಯಾಣಿಸಲಿದ್ದಾರೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.
ಇಂದಿನಿಂದ ರೈಲು ಸಂಚಾರ ಆರಂಭ
ಹಾಸನ: ಬೆಂಗಳೂರು–ಮಂಗಳೂರು ಮಾರ್ಗದ ಬಾಳ್ಳುಪೇಟೆ ಬಳಿ ಭೂಕುಸಿತ ಸಂಭವಿಸಿದ್ದ ಸ್ಥಳದಲ್ಲಿ ಮಣ್ಣು ತೆರವು ಕಾರ್ಯಾಚರಣೆ ಪೂರ್ಣಗೊಂಡಿದೆ. ರೈಲು ಹಳಿಗಳ ಸುರಕ್ಷತೆಯನ್ನು ಪರೀಕ್ಷಿಸಲಾಗಿದ್ದು, ಬುಧವಾರದಿಂದ ರೈಲು ಸಂಚಾರ ಮತ್ತೆ ಆರಂಭವಾಗಲಿದೆ.
‘ರೈಲು ಮಾರ್ಗದ ಮಣ್ಣು ತೆರವುಗೊಳಿಸಿದ್ದು, ಹಳಿಗಳ ಪಕ್ಕದಲ್ಲಿ ಭೂಕುಸಿತದ ಸಾಧ್ಯತೆ ಇರುವೆಡೆ ಮರಳಿನ ಚೀಲಗಳನ್ನು ಇಡಲಾಗಿದೆ. ಈ ಮಾರ್ಗವನ್ನು ಅಧಿಕಾರಿಗಳು ಪರಿಶೀಲಿಸಿದ್ದು, ರೈಲು ಸಂಚಾರಕ್ಕೆ ಯೋಗ್ಯವಾ ಗಿದೆ ಎಂದು ಪ್ರಮಾಣೀಕರಿಸಿದ್ದಾರೆ. ಹೀಗಾಗಿ, ಎಲ್ಲ ರೈಲುಗಳು ನಿಗದಿತ ವೇಳಾಪಟ್ಟಿಯಂತೆ ಸಂಚರಿಸಲಿವೆ’ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.