ಬೆಂಗಳೂರು: ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಮಂಡಿಸಿರುವ ಲಿಂಗತ್ವ ಅಲ್ಪಸಂಖ್ಯಾತರ (ಟ್ರಾನ್ಸ್ಜೆಂಡರ್) ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆಯನ್ನು ಹಿಂಪಡೆಯಬೇಕು ಎಂದು ಕರ್ನಾಟಕ ರಾಜ್ಯ ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತರ ಒಕ್ಕೂಟ ಆಗ್ರಹಿಸಿದೆ.

ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಮುಖಂಡರಾದ ಅಕ್ಕೈ ಪದ್ಮಶಾಲಿ, ಪ್ರಕಾಶಿ, ಅರವಿಂದ್ ನರೈನ್, ರೂಮಿ ಹರೀಶ್, ಮಾಯಾ, ಮೋನಿಕಾ, ರಕ್ಷಿತಾ ಅವರು, ‘ಹೋರಾಟದಿಂದ ಪಡೆದುಕೊಂಡ ಹಕ್ಕುಗಳನ್ನು ಈ ಮಸೂದೆಯ ಮೂಲಕ ಹಿಂಪಡೆಯಲಾಗುತ್ತಿದೆ. ಇದು ನಮ್ಮ ಅಸ್ತಿತ್ವವನ್ನು ಗುರುತಿಸುವ ಮೂಲಭೂತ ತತ್ವಕ್ಕೆ ವಿರುದ್ಧವಾಗಿದೆ. ಈ ಮಸೂದೆಯನ್ನು ಹಿಂಪಡೆಯುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ’ ಎಂದು ತಿಳಿಸಿದರು.

‘ಮಸೂದೆ ಪ್ರಕಾರ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಯನ್ನು ಕಿನ್ನರ್, ಹಿಜ್ರಾ, ಅರವಾಣಿ, ಜೋಗತಾ ಅಥವಾ ಯುನಕ್ ಎಂಬ ಸಾಂಸ್ಕೃತಿಕ ಗುರುತುಗಳಿಗೆ ಸೀಮಿತಗೊಳಿಸಲಾಗಿದೆ. ಲಿಂಗತ್ವ ಅಲ್ಪಸಂಖ್ಯಾತರ ಸ್ವಯಂ ಗುರುತಿನ ಹಕ್ಕು ಸೇರಿದಂತೆ ಎಲ್ಲ ಹಕ್ಕುಗಳನ್ನು ರಕ್ಷಿಸುವ ಬದಲು ಕಸಿದುಕೊಳ್ಳುತ್ತಿದೆ. ಮಸೂದೆ ಅನುಷ್ಠಾನಗೊಂಡರೆ ಟ್ರಾನ್ಸ್ಮೆನ್ಗಳನ್ನು ಕಾನೂನಿನ ಪ್ರಕಾರ ಟ್ರಾನ್ಸ್ಜೆಂಡರ್ ವ್ಯಕ್ತಿಗಳೆಂದು ಪರಿಗಣಿಸದೇ ಅವರ ಎಲ್ಲ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತದೆ’ ಎಂದು ವಿವರಿಸಿದರು.

‘ಟ್ರಾನ್ಸ್ವುಮೆನ್ ಎಂದು ಗುರುತಿಸಿಕೊಳ್ಳುವ ಅವಕಾಶವನ್ನು ಇದು ನಿರಾಕರಿಸುತ್ತದೆ. ಟ್ರಾನ್ಸ್ಜೆಂಡರ್ ವ್ಯಕ್ತಿ ಎಂಬ ಪದದ ವ್ಯಾಖ್ಯಾನವೇ ಸಂವಿಧಾನಬಾಹಿರವಾಗಿದೆ. ನಲ್ಸಾ ಮತ್ತು ಕೇಂದ್ರ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ಈ ತಿದ್ದುಪಡಿ ವಿರುದ್ಧವಾಗಿದೆ’ ಎಂದರು.

‘ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳು ಸರ್ಕಾರ ನೇಮಿಸುವ ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರ ಪಡೆದುಕೊಳ್ಳಬೇಕು. ಈ ಪ್ರಮಾಣ ಪತ್ರ ಪಡೆದ ನಂತರವೂ ನಮ್ಮ ಗುರುತಿನ ಮಾನ್ಯತೆ ನೀಡಬೇಕೊ ಅಥವಾ ಬೇಡವೂ ಎಂಬ ಅಧಿಕಾರವನ್ನು ಜಿಲ್ಲಾಧಿಕಾರಿಗೆ ನೀಡಲಾಗಿದೆ. ಇದು ನಮ್ಮ ಗೋಪ್ಯತೆ, ಸ್ವಾಯತ್ತತೆ ಮತ್ತು ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.