ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರವಣದೋಷದವರ ನೆರವಿಗೆ ಪಾರದರ್ಶಕ ಮಾಸ್ಕ್

Last Updated 20 ಮೇ 2020, 14:22 IST
ಅಕ್ಷರ ಗಾತ್ರ

ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಧರಿಸುತ್ತಿರುವ ಮಾಸ್ಕ್‌ಗಳು ಶ್ರವಣದೋಷವುಳ್ಳವರಿಗೆ ಹೊಸ ಸಂವಹನ ಸವಾಲು ಹುಟ್ಟು ಹಾಕಿವೆ.

ಮಾಸ್ಕ್‌ ಧರಿಸುವ ಕಾರಣದಿಂದಾಗಿ ಜನರ ಹಾವಭಾವ ಮತ್ತು ತುಟಿಗಳ ಚಲನೆಯಿಂದ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಕಿವಿ ಕೇಳದವರು ಪರದಾಡುತ್ತಿದ್ದಾರೆ.

ಮಾಸ್ಕ್‌ಗಳು ಜನರ ಸಂಭಾಷಣಾ ಧ್ವನಿಮಟ್ಟವನ್ನು ಕಾಲು ಭಾಗದಷ್ಟು(6ರಿಂದ 12 ಡೆಸಿಬಲ್ಸ್‌ನಷ್ಟು) ಕಡಿಮೆ ಮಾಡುತ್ತದೆ. ಇದರಿಂದ ಕಿವಿ ಕೇಳದ ಮಕ್ಕಳು, ವೃದ್ಧರು ತೊಂದರೆ ಅನುಭವಿಸುತ್ತಿದ್ದಾರೆ.

ಈ ಸಂವಹನ ತೊಂದರೆ ನಿವಾರಿಸಲುನಾಯಕ್ ವಾಕ್ –ಶ್ರವಣ ಸಂಸ್ಥೆಯ ಆಡಿಯೊಲಾಜಿಸ್ಟ್‌ ಎಂ.ಎಸ್‌.ಜೆ. ನಾಯಕ್‌ ಅವರು ಪಾರದರ್ಶಕ ಮಾಸ್ಕ್‌ ಸಿದ್ಧಪಡಿಸಿದ್ದಾರೆ.

ತುಟಿಗಳ ಚಲನವಲನ ಕಾಣುವಂತೆ ಮಾಸ್ಕ್ ಮಧ್ಯೆ ಪ್ಲಾಸ್ಟಿಕ್‌ ಪಾಲಿಮರ್‌ ಅಳವಡಿಸಲಾಗಿದೆ. ‌ಸಾಮಾನ್ಯ ಮಾಸ್ಕ್‌ಗಳಿಗಿಂತ ಇವುಗಳ ತಯಾರಿಕೆ ತುಸು ದುಬಾರಿ ಎನಿಸಬಹುದು.

ಸಂಸ್ಥೆಯ ಸಿಬ್ಬಂದಿ ಸದ್ಯ ಇಂಥ ಮಾಸ್ಕ್‌ ಧರಿಸುತ್ತಿದ್ದಾರೆ. ಯಾರಾದರೂ ಇಂಥ ಮಾಸ್ಕ್‌ ತಯಾರಿಸಲು ಮುಂದೆ ಬಂದರೆ ಉಚಿತವಾಗಿ ಮಾಹಿತಿ ನೀಡುವುದಾಗಿ ನಾಯಕ್‌ ಹೇಳಿದ್ದಾರೆ. ಸಂಪರ್ಕ ಸಂಖ್ಯೆ:9845058544, ಇ–ಮೇಲ್‌:msjnayaka@yahoo.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT