ಮಂಗಳವಾರ, ಮೇ 11, 2021
25 °C

ಸಾರಿಗೆ ಮುಷ್ಕರ: ಖಾಸಗಿ, ಕೆಎಸ್‌ಆರ್‌ಟಿಸಿ ಚಾಲಕರ ಪೈಪೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಾರಿಗೆ ಮುಷ್ಕರದ ನಡುವೆಯೂ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳ ಸಂಚಾರ ಹೆಚ್ಚಳವಾಗುತ್ತಿದ್ದು, ನಿಗಮದ ಬಸ್‌ ಚಾಲಕರು ಮತ್ತು ಖಾಸಗಿ ಬಸ್ ಚಾಲಕರ ನಡುವೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಪೈಪೋಟಿ ಶುರುವಾಗಿದೆ.

ಮುಷ್ಕರ ಆರಂಭವಾದ ದಿನದಿಂದ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿ ಖಾಸಗಿ ಬಸ್‌ಗಳು ದರ್ಬಾರ್ ಆರಂಭಿಸಿವೆ. ಈಗ ಸಾರಿಗೆ ಸಂಸ್ಥೆ ಬಸ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೂ, ನಿಲ್ದಾಣಗಳಲ್ಲಿ ಖಾಸಗಿ ಬಸ್‌ಗಳು ಕಾರ್ಯಾಚರಣೆ ಮುಂದುವರಿದಿದೆ.

ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ಕಾರಣ ಜನರನ್ನು ಹತ್ತಿಸಿಕೊಳ್ಳಲು ಬಸ್‌ಗಳ ಚಾಲಕರ ನಡುವೆ ಜಗಳವೇ ಏರ್ಪಡುತ್ತಿದೆ. ಖಾಸಗಿ ಬಸ್ ಹೋಗುವ ಮಾರ್ಗದಲ್ಲೇ ಹೋಗುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದ ಕೂಡಲೇ ಪ್ರಯಾಣಿಕರೆಲ್ಲರೂ ಇಳಿದು ನಿಗಮದ ಬಸ್‌ ಹತ್ತಿಕೊಳ್ಳುತ್ತಾರೆ. ಇದು ಚಾಲಕರ ನಡುವಿನ ಜಗಳಕ್ಕೆ ಕಾರಣವಾಗುತ್ತಿದೆ.

‘ಸಾರಿಗೆ ಸಂಸ್ಥೆ ಬಸ್‌ಗಳೇ ಇಲ್ಲದ ಸಂದರ್ಭದಲ್ಲಿ ನಾವು ಸೇವೆ ಒದಗಿಸಿದ್ದೇವೆ. ಸಂಸ್ಥೆಯ ಬಸ್‌ಗಳು ಬಂದ ಕೂಡಲೇ ನಮ್ಮನ್ನು ಕಡೆಗಣಿಸಲಾಗುತ್ತಿದೆ. ಪ್ರಯಾಣಿಕರನ್ನು ಹತ್ತಿಸಿಕೊಂಡಿರುವ ಖಾಸಗಿ ಬಸ್‌ ಹೊರಟ ಬಳಿಕವೇ ನಿಗಮದ ಬಸ್‌ಗಳನ್ನು ನಿಲ್ದಾಣಕ್ಕೆ ತರಬೇಕು ಎಂದು ಖಾಸಗಿ ಬಸ್ ಚಾಲಕರು ಮನವಿ ಮಾಡಿದರು.

ಬಿಎಂಟಿಸಿ ಬಸ್‌ ನಿಲ್ದಾಣದಲ್ಲೂ ಇದೇ ಸ್ಥಿತಿ ಇತ್ತು. ಬಿಎಂಟಿಸಿ ಹಾಗೂ ಖಾಸಗಿ ಬಸ್‌ಗಳು ಸಾಕಷ್ಟ ಸಂಖ್ಯೆಯಲ್ಲಿ ಇದ್ದರೂ, ಪ್ರಯಾಣಿಕರ ಕಡಿಮೆ ಸಂಖ್ಯೆಯಲ್ಲಿ ಇದ್ದರು.

386 ನೌಕರರ ವಿರುದ್ಧ ಎಫ್‌ಐಆರ್

ಬಸ್‌ಗಳ ಕಾರ್ಯಾಚರಣೆಗೆ ಅಡ್ಡಿಪಡಿಸಿದ ಕಾರಣಕ್ಕೆ ನಾಲ್ಕೂ ನಿಗಮಗಳ ವ್ಯಾಪ್ತಿಯ ಒಟ್ಟು 368 ನೌಕರರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

97 ಬಸ್‌ಗಳಿಗೆ ಹಾನಿಯಾಗಿದ್ದು, ಈ ಸಂಬಂಧ 85 ಜನರನ್ನು ಬಂಧಿಸಲಾಗಿದೆ. ಎಸ್ಮಾ ಕಾಯ್ದೆಯಡಿಯೂ 180 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಪೈಕಿ 50 ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವಿವರಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು