ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಷನ್ ಬೇಗ್‌ ಪುತ್ರನ ಕಂಪನಿಗೆ ಇ.ಡಿ. ನೋಟಿಸ್

Last Updated 15 ಜನವರಿ 2018, 20:02 IST
ಅಕ್ಷರ ಗಾತ್ರ

ಬೆಂಗಳೂರು: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್‌ ಅವರ ಪುತ್ರ ರುಮಾನ್ ರೋಷನ್‌ ಬೇಗ್ ಒಡೆತನದ ರುಮಾನ್ ಎಂಟರ್‌ಪ್ರೈಸಸ್‌ಗೆ ಜಾರಿ ನಿರ್ದೇಶನಾಲಯ (ಇ.ಡಿ‌) ಸೋಮವಾರ ನೋಟಿಸ್ ನೀಡಿದೆ.

ಇನ್‌ಫೆಂಟ್ರಿ ರಸ್ತೆಯ ಗಣೇಶ ಟವರ್‌ನಲ್ಲಿರುವ ರುಮಾನ್ ಎಂಟರ್‌ಪ್ರೈಸಸ್‌ಗೆ ರೋಷನ್‌ ಬೇಗ್ ಪತ್ನಿ ಸಬೀಹಾ ಫಾತಿಮಾ ಮತ್ತು ರೆಹಮಾನ್ ನಿರ್ದೇಶಕರಾಗಿದ್ದಾರೆ.

ರುಮಾನ್ ಎಂಟರ್‌ಪ್ರೈಸಸ್‌ಗೆ 2008ರಲ್ಲಿ ಅರಬ್‌ ಕಂಪನಿಯೊಂದರಿಂದ ₹ 2 ಕೋಟಿಗೂ ಹೆಚ್ಚು ಹಣ ಪಾವತಿಯಾಗಿದೆ ಎಂದು
ಇ.ಡಿ. ನೋಟಿಸ್‌ನಲ್ಲಿ ಹೇಳಿದೆ.

ಮುಖ್ಯಮಂತ್ರಿಗೆ ವಿವರಣೆ
ಇ.ಡಿ ನೋಟಿಸ್‌ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ರೋಷನ್‌ಬೇಗ್ ವಿವರಣೆ ನೀಡಿದರು.

ಗೃಹ ಕಚೇರಿ ಕೃಷ್ಣಾಕ್ಕೆ ಬಂದ ಬೇಗ್‌, ಬೇರೊಂದು ಕಾರ್ಯಕ್ರಮಕ್ಕೆ ಹೊರಟಿದ್ದ ಮುಖ್ಯಮಂತ್ರಿ ಅವರೊಂದಿಗೆ ಕಾರಿನಲ್ಲೇ ಹೋದರು. ಪ್ರತಿಕ್ರಿಯೆ ಪಡೆಯಲು ಮಾಧ್ಯಮ ಪ್ರತಿನಿಧಿಗಳು ಪ್ರಯತ್ನಿಸಿದರೂ, ಕಾರಿನ ಗಾಜು ಇಳಿಸದೆ ಹೊರಟರು.

* ಜಾರಿ ನಿರ್ದೇಶನಾಲಯದಿಂದ ನೋಟಿಸ್ ಬಂದಿದ್ದರೆ ಅದಕ್ಕೆ ಕಾನೂನು ರೀತಿ ಉತ್ತರ ನೀಡುತ್ತೇವೆ

– ರೋಷನ್‌ ಬೇಗ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT