ಮಂಗಳವಾರ, ಅಕ್ಟೋಬರ್ 4, 2022
26 °C

ಡಿಸಿಪಿ ಕಾರಿನ ಮೇಲೆ ಬಿದ್ದ ಮರದ ಕೊಂಬೆ: ಚಾಲಕ ಪಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಅವರ ಕಾರಿನ ಮೇಲೆ ಮರದ ಕೊಂಬೆಯೊಂದು ಮುರಿದು ಬಿದ್ದಿದ್ದು, ಕಾರು ಭಾಗಶಃ ಜಖಂಗೊಂಡಿದೆ. ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ.

‘ಡಿಸಿಪಿ ಕಚೇರಿ ಆವರಣದಲ್ಲಿ ಮರವಿದೆ. ಮಳೆ, ಗಾಳಿಯಿಂದಾಗಿ ಮರದ ಕೊಂಬೆ ಸಡಿಲಗೊಂಡಿತ್ತು. ಅದೇ ಕೊಂಬೆ ಏಕಾಏಕಿ ಮುರಿದು ಬಿದ್ದಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಶನಿವಾರ ಕಚೇರಿಗೆ ಡಿಸಿಪಿ ಅವರನ್ನು ಕರೆತಂದಿದ್ದ ಚಾಲಕ, ಡಿಸಿಪಿ ಕಚೇರಿಗೆ ತೆರಳಿದ ಬಳಿಕ ಕಾರಿನಲ್ಲಿ ಕುಳಿತಿದ್ದರು. ಮೊಬೈಲ್‌ ಕರೆ ಬಂದಿದ್ದು, ಇಳಿದು ಮಾತನಾಡುತ್ತ ಬೇರೆಡೆ ತೆರಳಿದ್ದರು. ಆಗ ಕೊಂಬೆ ಬಿದ್ದಿದೆ’ ಎಂದೂ ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು