ಕಾರ್ಯಕರ್ತನಿಗೆ ಹೊಡೆದ ಮಾಜಿ ಶಾಸಕ ಸುರೇಶ್‌ಗೌಡ
ತುಮಕೂರು: ಜೈಕಾರ ಹಾಕಿದ ಕಾರ್ಯಕರ್ತನಿಗೆ ಮಾಜಿ ಶಾಸಕ ಸುರೇಶ್‌ಗೌಡ ಹೊಡೆದ ಘಟನೆ ತಾಲ್ಲೂಕು ಬಳಗೆರೆಯಲ್ಲಿ ಶನಿವಾರ ಸಂಜೆ ನಡೆದಿದೆ.
ಗ್ರಾಮದ ದೇವರ ಉತ್ಸವ ಕಾರ್ಯಕ್ರಮದಲ್ಲಿ ಭಕ್ತರಿಗೆ ದಾಸೋಹ ಆಯೋಜಿಸಲಾಗಿತ್ತು. ಊಟದ ಪಂಕ್ತಿಯಲ್ಲಿನ ಜನರನ್ನು ಸುರೇಶ್ ಗೌಡ ಮಾತನಾಡಿಸುತ್ತಿದ್ದರು. ವೇಳೆ ಹಿಂದೆ ಬರುತ್ತಿದ್ದ ಕಾರ್ಯಕರ್ತನೊಬ್ಬ ಜೋರು ಧ್ವನಿಯಲ್ಲಿ ಜೈಕಾರ ಕೂಗಿದ್ದಕ್ಕೆ ಸಿಟ್ಟಿಗೆದ್ದ ಸುರೇಶ್‌ಗೌಡ ಕಾರ್ಯಕರ್ತನ ಹೊಟ್ಟೆ ಮೇಲೆ ಹೊಡೆದು ಜೈಕಾರ ಕೂಗಬೇಡ ಎಂದಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.