ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುವೆಗೆ ತ್ಯಾಜ್ಯ ನೀರು: 203 ಕಟ್ಟಡಗಳಿಗೆ ನೋಟಿಸ್

ಜಲಚರಗಳ ಮಾರಣಹೋಮ
Last Updated 14 ಅಕ್ಟೋಬರ್ 2019, 19:42 IST
ಅಕ್ಷರ ಗಾತ್ರ

ಬೆಂಗಳೂರು: ಒಳಚರಂಡಿ ಸಂಪರ್ಕ ಪಡೆಯದೇ ಅನಧಿಕೃತವಾಗಿ ನಗರದ ಮಳೆ ನೀರು ಕಾಲುವೆಗೆ ತ್ಯಾಜ್ಯ ನೀರು ಹರಿಯಬಿಟ್ಟಿದ್ದ 236 ಕಟ್ಟಡಗಳ ಪೈಕಿ, 203 ಕಟ್ಟಡಗಳ ಮಾಲೀಕರಿಗೆ ಜಲಮಂಡಳಿಯು ನೋಟಿಸ್‌ ನೀಡಿದೆ.

ಈ ಕಟ್ಟಡಗಳ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಜಲಮಂಡಳಿಯು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ಪಟ್ಟಿ ಕಳಿಸಿತ್ತು.

‘ಕೆಎಸ್‌ಪಿಸಿಬಿ ಸೂಚನೆ ಮೇರೆಗೆ ಈಗ 203 ಕಟ್ಟಡಗಳ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಉಳಿದ 33 ಕಟ್ಟಡಗಳ ಮಾಲೀಕರಿಗೆ ನಂತರ ನೋಟಿಸ್‌ ನೀಡಲಾಗುವುದು’ ಎಂದು ಜಲಮಂಡಳಿ ನಿರ್ವಹಣೆ ವಿಭಾಗದ ಮುಖ್ಯ ಎಂಜಿನಿಯರ್ ಬಿ.ಸಿ. ಗಂಗಾಧರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪೂರ್ವ, ವಾಯವ್ಯ ಹಾಗೂ ಉತ್ತರ ವಿಭಾಗಗಳಲ್ಲಿ ವೈಟ್‌ಫೀಲ್ಡ್, ಅಂಬೇಡ್ಕರ್ ನಗರ, ಅಯ್ಯಪ್ಪನಗರ, ಪೈ ಲೇಔಟ್, ಗರುಡಾಚಾರ್ ಪಾಳ್ಯ, ಪಾಪರೆಡ್ಡಿ ಪಾಳ್ಯ, ಜಿಸಿ ಪಾಳ್ಯ, ಐಟಿಪಿಎಲ್ ಮುಖ್ಯ ರಸ್ತೆ, ಕುಂದನಹಳ್ಳಿ, ಕಾಡುಗೋಡಿ, ಚಿನ್ನಪ್ಪನಹಳ್ಳಿ, ತಿಗಳರಪಾಳ್ಯ, ಮುನೇನಕೊಳಲು, ಅಶ್ವತ್ಥ್ ನಗರ, ಚೊಕ್ಕಸಂದ್ರ, ಯಲಹಂಕ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಈ ಕಟ್ಟಡಗಳು ಇವೆ. ನಗರದ ಮಳೆನೀರು ಕಾಲುವೆಗಳಿಂದ ಕೆರೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಈ ಕಾಲುವೆಗಳ ಮೂಲಕ ತ್ಯಾಜ್ಯದ ನೀರು ಕೆರೆಗಳಿಗೆ ಹರಿದು ಕೆರೆಯ ನೀರೂ ಕಲುಷಿತವಾಗುತ್ತಿದೆ.

ಕೆರೆ ಕಲುಷಿತಗೊಳ್ಳುತ್ತಿರುವುದರಿಂದ ಜಲಚರಗಳು ಸಾವಿಗೀಡಾಗುತ್ತಿವೆ. ಅಂತರ್ಜಲ ಕೂಡ ಕಲುಷಿತಗೊಳ್ಳುತ್ತಿದೆ.

‘ನೋಟಿಸ್‌ ಪಡೆದಿರುವ ಕಟ್ಟಡಗಳ ಮಾಲೀಕರು 15 ದಿನದೊಳಗೆ ಉತ್ತರ ನೀಡಬೇಕು. ಅಧಿಕೃತವಾಗಿ ಸಂಪರ್ಕ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ನಿಗದಿತ ಶುಲ್ಕ ಪಾವತಿಸುತ್ತಿದ್ದಂತೆ ಸಂಪರ್ಕ ನೀಡಲಾಗುವುದು. ಈ ಕಟ್ಟಡಗಳಿಂದ ಹೊರಬರುವ ತ್ಯಾಜ್ಯ ನೀರು ನಿರ್ವಹಣೆಗೆ ಮಂಡಳಿ ವ್ಯವಸ್ಥೆ ಮಾಡುತ್ತದೆ’ ಎಂದು ಗಂಗಾಧರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT