ನಕಲಿ ದಾಖಲೆ ನೀಡಿ ಸಾಲ: ಇಬ್ಬರ ಬಂಧನ
ಬೆಂಗಳೂರು: ಆಸ್ತಿಯ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ನಿಂದ ಸಾಲ ಪಡೆದು ವಂಚಿಸಿದ್ದ ಇಬ್ಬರನ್ನು ಶೇಷಾದ್ರಿಪುರ ಪೊಲೀಸರು ಬಂಧಿಸಿದ್ದಾರೆ.
‘ತಿಪಟೂರಿನ ಲೋಕೇಶ್ ಹಾಗೂ ಅಯೂಬ್ ಬಂಧಿತರು. ಇವರಿಬ್ಬರು ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದರು. ಇತ್ತೀಚೆಗೆ ಲಭ್ಯವಾದ ಸುಳಿವು ಆಧರಿಸಿ ಇವರನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಖಾಲಿ ನಿವೇಶನಗಳ ಮಾಲೀಕರನ್ನು ಸಂಪರ್ಕಿಸುತ್ತಿದ್ದರು. ನಿವೇಶನ ಖರೀದಿಸುವುದಾಗಿ ಹೇಳಿ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಪಡೆದು ನಾಪತ್ತೆಯಾಗುತ್ತಿದ್ದರು. ಅದೇ ಜೆರಾಕ್ಸ್ ಪ್ರತಿಗಳನ್ನು ಬಳಸಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು.’
‘ಆರೋಪಿಗಳು ಈ ವರೆಗೂ ₹ 2 ಕೋಟಿ ಸಾಲ ಪಡೆದು ವಂಚಿಸಿರುವ ಮಾಹಿತಿ ಇದೆ’ ಎಂದು ಮೂಲಗಳು ತಿಳಿಸಿವೆ.
‘ವಿಶೇಷ ತಂಡದ ಪೊಲೀಸರು, ಆರೋಪಿಗಳನ್ನು ಬಂಧಿಸಲು ಹೋಗಿದ್ದರು. ಅವರ ಜೊತೆ ವಾಗ್ವಾದ ನಡೆಸಿದ್ದ ಆರೋಪಿ ಲೋಕೇಶ್, ‘ನೂರಾರು ಕೋಟಿ ರೂಪಾಯಿ ಸಾಲ ಮಾಡಿರುವ ವಿಜಯ್ ಮಲ್ಯ ಅವರಿಗೆ ನೀವು ಏನು ಮಾಡುವುದಿಲ್ಲ. ₹ 2 ಕೋಟಿ ಪಡೆದಿರುವ ನನ್ನನ್ನು ಬಂಧಿಸಲು ಬಂದಿದ್ದಿರಾ. ಅವರನ್ನು ಹಿಡಿದುಕೊಂಡು ಬನ್ನಿ ನೋಡೋಣ’ ಎಂಬುದಾಗಿ ಪ್ರಶ್ನಿಸಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.