ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಕ್ಯಾಂಟರ್‌ ಡಿಕ್ಕಿ ಹೊಡೆದು ಇಬ್ಬರ ಸಾವು

Published : 17 ಆಗಸ್ಟ್ 2024, 14:40 IST
Last Updated : 17 ಆಗಸ್ಟ್ 2024, 14:40 IST
ಫಾಲೋ ಮಾಡಿ
Comments

ಬೆಂಗಳೂರು: ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಕ್ಯಾಂಟರ್‌ವೊಂದು ಡಿಕ್ಕಿ ಹೊಡೆದು ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ಇಬ್ಬರು ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.   

ಕುವೆಂಪುನಗರ ನಿವಾಸಿಗಳಾದ ಮಹಮದ್‌ ಶಾಹಿಬ್ ರಾಝಾ (21), ರೆಹಾನ್ ರಾಝಾ (14) ಸ್ಥಳದಲ್ಲೇ ಮೃತಪಟ್ಟಿದ್ದು, ತಾಸಿಮಾ (47) ಅವರಿಗೆ ಗಾಯಗಳಾಗಿವೆ. ಕ್ಯಾಂಟರ್ ವಶಕ್ಕೆ ಪಡೆದು ಚಾಲಕ ಸುರೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಮೈಸೂರು ರಸ್ತೆಯ ಹೊಸಗುಡ್ಡದಹಳ್ಳಿ ಸಮೀಪ ದ್ವಿಚಕ್ರ ವಾಹನದಲ್ಲಿ ಮಹಮದ್ ಶಾಹಿಬ್ ರಾಝಾ, ರೆಹಾನ್ ಹಾಗೂ ತಾಸಿಮಾ ಬರುತ್ತಿದ್ದರು. ಎದುರಿನಿಂದ ಬಂದ ಹಾಲೊಬ್ಲಾಕ್ ತುಂಬಿದ್ದ ಕ್ಯಾಂಟರ್ ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಬೈಕ್​ನಿಂದ ಕೆಳಗೆ ಬಿದ್ದ ಇಬ್ಬರ ಮೇಲೆ ಕ್ಯಾಂಟರ್‌ ಚಕ್ರ ಹರಿದಿದೆ, ಇಬ್ಬರನ್ನು 100 ಮೀಟರ್‌ವರೆಗೂ ಎಳೆದೊಯ್ದಿದೆ. ರಸ್ತೆ ಬದಿ ನಿಲ್ಲಿಸಿದ್ದ ಏಳು ದ್ವಿಚಕ್ರ ವಾಹನಗಳು ಹಾಗೂ ಎರಡು ಕಾರು ಜಖಂ ಆಗಿವೆ. ಚಾಲಕ ಅಲ್ಲಿಂದ ತಪ್ಪಿಸಿಕೊಂಡು ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾರೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT