ಪ್ರಜಾವಾಣಿ ವಾರ್ತೆ

ಬೆಂಗಳೂರು: ಉಬರ್ ಅಗ್ರಿಗೇಟರ್ ಕಂಪನಿಯ ಸಾರಿಗೆ ಪರವಾನಗಿಯನ್ನು 2026ರ ಡಿಸೆಂಬರ್ 30ರವರೆಗೆ ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರ (ಕೆಎಸ್ಟಿಎ) ನವೀಕರಿಸಿದೆ. ಪರವಾನಗಿಯು ತ್ರಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಮಾತ್ರ ಅನ್ವಯವಾಗಲಿದೆ.

ಸಾರಿಗೆ ನಿಯಮಗಳು–2016ರ ಅಡಿಯಲ್ಲಿ 2021ರ ಡಿಸೆಂಬರ್ 31ರಿಂದ ಅನ್ವಯವಾಗುವಂತೆ ಐದು ವರ್ಷಗಳ ಅವಧಿಗೆ ಪರವಾನಗಿ ನವೀಕರಣಗೊಂಡಿದೆ ಎಂದು ಉಬರ್ ವಕ್ತಾರರು ತಿಳಿಸಿದ್ದಾರೆ.

‘ಭಾರತದಲ್ಲಿ ಉಬರ್ನ ಪ್ರಮುಖ ಮಾರುಕಟ್ಟೆಗಳಲ್ಲಿ ಕರ್ನಾಟಕವೂ ಒಂದು. ಕರ್ನಾಟಕದಲ್ಲಿ ಸಾರಿಗೆ ಪರವಾನಗಿಯನ್ನು ಸ್ವೀಕರಿಸಲು ಸಂತೋಷಪಡುತ್ತೇವೆ. ಈ ಪರವಾನಗಿಯು ರಾಜ್ಯದಾದ್ಯಂತ ಸೇವೆ ಸಲ್ಲಿಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಸುರಕ್ಷಿತ, ವಿಶ್ವಾಸಾರ್ಹ ಮತ್ತು ತಂತ್ರಜ್ಞಾನ ಆಧಾರಿತ ಚಲನಶೀಲ ಪರಿಸರಸ್ನೇಹಿ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರದೊಂದಿಗೆ ಕೆಲಸ ಮಾಡುವತ್ತ ಗಮನಹರಿಸಿದ್ದೇವೆ’ ಎಂದು ಹೇಳಿದ್ದಾರೆ.

2013ರಲ್ಲಿ ಭಾರತಕ್ಕೆ ಪ್ರವೇಶಿಸಿದಾಗಿನಿಂದ, ಉಬರ್ ನಾಲ್ಕು ಚಕ್ರಗಳ ವಾಹನ ತಯಾರಕ ಕಂಪನಿಯಿಂದ ವಿಸ್ತೃತ ವಾಹನ ವಿಭಾಗಗಳಲ್ಲಿ ಸೇವೆಗಳನ್ನು ನೀಡುವತ್ತ ವಿಕಸನಗೊಂಡಿದೆ. ಕಳೆದ ವರ್ಷ ಉಬರ್ ಬೆಂಗಳೂರಿನಲ್ಲಿ ಮೆಟ್ರೊ-ಟಿಕೆಟಿಂಗ್ ಅನ್ನು ಪ್ರಾರಂಭಿಸಿತ್ತು’ ಎಂದು ರೈಡ್-ಹೀಲಿಂಗ್ ಪ್ಲಾಟ್ಫಾರ್ಮ್ ತಿಳಿಸಿದೆ.

ನಾಲ್ಕು ವರ್ಷಗಳಿಂದ ಇರಲಿಲ್ಲ ಪರವಾನಗಿ: ಅಗ್ರಿಗೇಟರ್ ಕಂಪನಿಗಳಾದ ಓಲಾದ ಪರವಾನಗಿ 2021ರ ಜೂನ್ ಹಾಗೂ ಉಬರ್ನ ಪರವಾನಗಿ 2021ರ ಡಿಸೆಂಬರ್ಗೆ ಮುಕ್ತಾಯಗೊಂಡಿತ್ತು. ಈ ಕಂಪನಿಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು. ಹಾಗಾಗಿ ಎರಡೂ ಕಂಪನಿಗಳು ಕಾರ್ಯಾಚರಣೆಯನ್ನು ಮುಂದುವರಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.