ಬೆಂಗಳೂರು: ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಹಲಸೂರು ಕೆರೆಗೆ ಆಧುನಿಕ ಸ್ಪರ್ಶ ನೀಡಲಾಗುತ್ತಿದೆ. ಕೆರೆಯಲ್ಲಿ ದೋಣಿ ವಿಹಾರ, ಉದ್ಯಾನದ ಅಭಿವೃದ್ಧಿ, ನಡಿಗೆ ಪಥಗಳ ನಿರ್ಮಾಣ ಹಾಗೂ ಕೆರೆಯ ಸೌಂದರ್ಯಿಕರಣದ ಕಾಮಗಾರಿಗಳು ಭರದಿಂದ ನಡೆಯುತ್ತಿವೆ. ಕೆರೆಯ ಹೂಳು ತೆಗೆಯುವ ಕಾಮಗಾರಿಗೆ ವೇಗ ನೀಡಲಾಗಿದೆ.

ಹಲಸೂರು ಕೆರೆಗೆ ಕಾಯಕಲ್ಪ ನೀಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಂದಾಗಿದೆ. ಅಂದಾಜು 106 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಕೆರೆಯ ನಡುವೆ ಅಲ್ಲಲ್ಲಿ ನಡುಗಡ್ಡೆಗಳಿವೆ. ಅಲ್ಲಿ ಈಗಾಗಲೇ ಹಸಿರು ತುಂಬಿದ ಮರಗಳಿವೆ. ಇನ್ನಷ್ಟು ವಿಶಿಷ್ಟ ಪ್ರಭೇದದ ಗಿಡಗಳನ್ನು ನೆಡುವ ಮೂಲಕ ಪಕ್ಷಿಗಳನ್ನು ಸೆಳೆಯಲಾಗುತ್ತದೆ. ಇದಕ್ಕಾಗಿ ತಜ್ಞರ ನೇತೃತ್ವದಲ್ಲಿ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ. ಇವು ಕೆರೆಯ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಲಿವೆ. ಬೆಂಗಳೂರು ಪೂರ್ವ ಭಾಗದ ಜನರಿಗೆ ಅತ್ಯುತ್ತಮ ಮನರಂಜನೆ ತಾಣವನ್ನಾಗಿಸುವ ಪ್ರಯತ್ನ ನಡೆದಿದೆ.

ಸಣ್ಣ ನೀರಾವರಿ ಇಲಾಖೆ ಹಾಗೂ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್ಡಿಎಂಎಫ್) ಅಡಿಯಲ್ಲಿ ₹24 ಕೋಟಿ ಅನುದಾನದಲ್ಲಿ ಕೆರೆಯ ಸಂಪೂರ್ಣ ಹೂಳು ತೆರವು (ಡಿಸಿಲ್ಡಿಂಗ್) ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಕಾಮಗಾರಿಗೆ ಚಾಲನೆ ನೀಡಿದ್ದು, ಕೆರೆಯ ಕಾಲುದಾರಿಯ ಅಭಿವೃದ್ಧಿ, ಕೆರೆಯ ಸುತ್ತಲೂ ಗ್ರಿಲ್ ಅಳವಡಿಸುವ ಕಾಮಗಾರಿ, ಗೆಬಿಯಾನ್ ಗೋಡೆ ನಿರ್ಮಾಣದ ಕೆಲಸಗಳು ನಡೆಯುತ್ತಿವೆ. ಕೆರೆಯಲ್ಲಿ ತುಂಬಿರುವ ಹೂಳನ್ನು ತೆಗೆಯುವ ಕೆಲಸ ನಡೆಯುತ್ತಿದೆ’ ಎಂದು ಜಿಬಿಎ ಕೆರೆ ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಈಗಾಗಲೇ ಗುಣಮಟ್ಟದ ನಡಿಗೆ ಪಥಗಳನ್ನು ನಿರ್ಮಿಸಲಾಗುತ್ತಿದೆ. ಕೆರೆಯ ನಡುವೆ ಆಕರ್ಷಕ ಕಾರಂಜಿಗಳ ಅಳವಡಿಕೆಗೂ ವ್ಯವಸ್ಥೆ ಮಾಡಲಾಗುತ್ತಿದೆ. ನಗರದ ಜನರ ವಿಹಾರಕ್ಕೆ ಪ್ರಶಸ್ತ ನೆಲೆಯನ್ನಾಗಿ ಅಭಿವೃದ್ಧಿ ಮಾಡಲಾಗುತ್ತದೆ. ಹಲಸೂರು ಕೆರೆಯಲ್ಲಿನ ಹೂಳು ತೆಗೆಯುವುದು, ದ್ವಿಪಥ ಪಾದಚಾರಿ ಮಾರ್ಗ ನಿರ್ಮಾಣ, ಕೆರೆಯ ಸುತ್ತಲೂ ತಡೆ ಗೋಡೆಯನ್ನು ನಿರ್ಮಿಸುವುದು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಅವರು ಚಾಲನೆ ನೀಡಿದ್ದಾರೆ’ ಎಂದು ವಿವರಿಸಿದರು.

‘ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಕಲ್ಯಾಣಿಯ ಹಿಂಭಾಗದಲ್ಲಿರುವ ಒಳಚರಂಡಿಯ ಮೂಲಕ ಕಲುಷಿತ ನೀರು ಕೆರೆಯ ಒಡಲು ಸೇರದಂತೆ ತಡೆಗೋಡೆ ನಿರ್ಮಿಸಲಾಗುತ್ತಿದೆ. ಈಗಾಗಲೇ ಕೆರೆ ಸೇರಿದಂತೆ ಈ ಭಾಗದಲ್ಲಿ ಹೂಳನ್ನು ತೆಗೆಯುವ ಕಾಮಗಾರಿ ಪ್ರಾರಂಭಿಸಲಾಗಿದೆ. ಕೆರೆ ಸುತ್ತಲೂ ಇರುವ ತಡೆಗೋಡೆ ಶಿಥಿಲಗೊಂಡಿದ್ದು, ಅದನ್ನು ದುರಸ್ತಿಗೊಳಿಸಿ, ಗ್ರೀಲ್ಗಳನ್ನು ಅಳವಡಿಕೆ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ಈ ಕೆರೆಯನ್ನು ಅಭಿವೃದ್ಧಿಗೊಳಿಸಿ, ಪ್ರವಾಸಿ ತಾಣವನ್ನಾಗಿ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಕೆರೆಯ ದಡದಲ್ಲಿ ಉದ್ಯಾನ ಜತೆಗೆ ಮಕ್ಕಳ ಮನರಂಜನೆಗಾಗಿ ಆಟಿಕೆಗಳನ್ನು ಅಳವಡಿಕೆ ಮಾಡಲಾಗುತ್ತದೆ. ಇದಕ್ಕಾಗಿ ಡ್ರಾಪ್ ಆಫ್ ಪಾಯಿಂಟ್ ಅನ್ನು ನಿರ್ಮಿಸಲಾಗುತ್ತಿದೆ. ಕೆರೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲು ರೂಪುರೇಷೆಗಳನ್ನು ತಯಾರಿಸಲಾಗಿದೆ. ಪಾದಚಾರಿ ಮಾರ್ಗದ ಕಾಮಗಾರಿ ಈಗಾಗಲೇ ಮುಕ್ತಾಯದ ಹಂತಕ್ಕೆ ಬಂದಿದೆ’ ಎಂದರು.

ಕೆರೆ ಅಭಿವೃದ್ಧಿಗೆ ಪಣ

ಬ್ರ್ಯಾಂಡ್ ಬೆಂಗಳೂರು ಯೋಜನೆ ಅಡಿಯಲ್ಲಿ ಹಲಸೂರು ಕೆರೆ ಅಭಿವೃದ್ಧಿಪಡಿಸಲು ಅನುದಾನ ನೀಡಲಾಗಿದೆ. ದ್ವಿಪಥ ಪಾದಚಾರಿ ಮಾರ್ಗ ಗ್ರೀಲ್ ಅಳವಡಿಕೆ ಹೂಳು ತೆಗೆಯುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದರ ಜೊತೆಗೆ ಕಲ್ಯಾಣಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕೆರೆಯ ಆವರಣಕ್ಕೆ ಪ್ರವೇಶಿಸಲು ಜಾಗ ಇರಲಿಲ್ಲ. ಆದ್ದರಿಂದ ಉದ್ಯಾನ ಸೇರಿದಂತೆ ಎಲ್ಲ ಕಡೆಗೂ ಒಡಾಡಲು ರಸ್ತೆ ಸಂಪರ್ಕ ಕಲ್ಪಿಸಲಾಗುತ್ತದೆ. ಕೆರೆಯ ದಡದಲ್ಲಿ ಇರುವ ಉದ್ಯಾನದಲ್ಲಿ ಸಾರ್ವಜನಿಕರು ಕುಳಿತುಕೊಳ್ಳಲು ಬೆಂಚ್ಗಳನ್ನು ಹಾಕಲಾಗುತ್ತದೆ’ ಎಂದು ಜಿಬಿಎ ಕೆರೆ ವಿಭಾಗದ ಅಧಿಕಾರಿಯೊಬ್ಬರು ಪ್ರಜಾವಾಣಿ’ಗೆ ತಿಳಿಸಿದರು. ಕೆಎಸ್ಟಿಡಿಸಿ ವತಿಯಿಂದ ಹಲಸೂರು ಕೆರೆಯಲ್ಲಿ ದೋಣಿ ವಿಹಾರ ನಡೆಸುವ ಚಿಂತನೆ ಇದೆ. ಕೆರೆ ತುಂಬಿದ ನಂತರ ದೋಣಿ ವಿಹಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.

‘ಹಲಸೂರು ಕೆರೆಯ ಗತವೈಭವ ಮರುಸ್ಥಾಪಿಸಿ’

‘ಕೆರೆಯ ನಡುಗಡ್ಡೆಗಳ ತಡೆಗೋಡೆ ಹಾಳಾಗಿದೆ. ಅವುಗಳನ್ನು ಪುನರ್ ನಿರ್ಮಿಸಬೇಕು. ಈ ನಡುಗಡ್ಡೆಗಳಿಗೆ ಹಿಂದೆ ದೇಶ–ವಿದೇಶಗಳ ಹಕ್ಕಿಗಳು ಬರುತ್ತಿದ್ದವು. ಆದರೆ ಈಗ ಬರುತ್ತಿಲ್ಲ. ಆದ್ದರಿಂದ ಈ ಹಕ್ಕಿಗಳನ್ನು ಆಕರ್ಷಿಲು ವಿವಿಧ ಬಗೆಯ ಗಿಡಗಳನ್ನು ನೆಟ್ಟು ಬೆಳೆಸಬೇಕು. ಈ ಮೂಲಕ ಕೆರೆಯ ಗತ ವೈಭವವನ್ನು ಮರು ಸ್ಥಾಪಿಸಬೇಕು’ ಎಂದು ಹಲಸೂರಿನ ದೇವರಾಜ್ ತಿಳಿಸಿದರು.

106: ಎಕರೆಕೆರೆಯ ವಿಸ್ತೀರ್ಣ

₹ 24 ಕೋಟಿ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಒದಗಿಸಿರುವ ಅನುದಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.