ಉಪ್ಪಾರ ಪ್ರತಿಭಾ ಪುರಸ್ಕಾರ ವಿತರಣೆ 14ರಂದು

ಗುರುವಾರ , ಜೂಲೈ 18, 2019
24 °C

ಉಪ್ಪಾರ ಪ್ರತಿಭಾ ಪುರಸ್ಕಾರ ವಿತರಣೆ 14ರಂದು

Published:
Updated:

ಬೆಂಗಳೂರು: ಅಖಿಲ ಕರ್ನಾಟಕ ಉಪ್ಪಾರ ಮಹಾಸಭಾ ಹಾಗೂ ಧಾರವಾಡ ಜಿಲ್ಲಾ ಉಪ್ಪಾರ ಸಮಾಜ ಸೇವಾ ಸಂಘದ ವತಿಯಿಂದ
ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ 2018–19 ನೇ ಸಾಲಿನ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮವನ್ನು ಹುಬ್ಬಳ್ಳಿಯಲ್ಲಿ ಇದೇ 14 ರಂದು ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಸಂಘದ ಅಧ್ಯಕ್ಷ ವಿಷ್ಣು ಲಾತೂರ್, ‘ಎಸ್ಸೆಸ್ಸೆಲ್ಸಿ, ದ್ವಿತೀಯ ಪಿ.ಯು. ಪರೀಕ್ಷೆಗಳಲ್ಲಿ ಶೇ 80ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.  ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಉಪ್ಪಾರ ಸಮಾಜದ   ಯುವಕ–ಯುವತಿಯರಿಗೆ ಸನ್ಮಾನ ಮಾಡಲಾಗುವುದು. ಅದೇ ದಿನ ವೃತ್ತಿ ತರಬೇತಿ ಕುರಿತು  ಕೌನ್ಸೆಲಿಂಗ್‌ ಕೂಡಾ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಆಸಕ್ತ ವಿದ್ಯಾರ್ಥಿಗಳು ಭಾವಚಿತ್ರ, ಅಂಕಪಟ್ಟಿ ಹಾಗೂ ಜಾತಿ ಪ್ರಮಾಣ ಪತ್ರದ ಪ್ರತಿಯೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು’ ಎಂದರು. ಸ್ಥಳ: ಹೋಟೆಲ್ ಮಯೂರ, ಆದಿತ್ಯ ರೆಸಾರ್ಟ್‌, ನವಲೂರು ಬಸ್‌ ನಿಲ್ದಾಣದ ಬಳಿ, ಪಿ.ಬಿ.ರಸ್ತೆ, ಹುಬ್ಬಳ್ಳಿ 

ಸಂಪರ್ಕ: 9448899600

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !