ಬೆಂಗಳೂರು: ‘ಕೇಂದ್ರ ಲೋಕಸೇವಾ ಆಯೋಗದ( ಯುಪಿಎಸ್ಸಿ) ನಾಗರಿಕ ಸೇವಾ ಪರೀಕ್ಷೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ನವದೆಹಲಿಗೆ ಹೋಗುವ ಕನ್ನಡಿಗರಿಗೆ ವಿದ್ಯಾರ್ಥಿನಿಲಯ ಸಹಿತ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ನಗರದ ಇಂಡಿಯಾ ಫಾರ್ ಐಎಎಸ್ ಅಕಾಡೆಮಿಯಲ್ಲಿ ತರಬೇತಿ ಪಡೆದು 2025-26ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆಯಾದ ರಾಜ್ಯದ 19 ಸಾಧಕರಿಗೆ ಪುರಭವನದಲ್ಲಿ ಸೋಮವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕೆಂದರೆ ತಯಾರಿಗೆ ಒತ್ತು ನೀಡಲೇಬೇಕು. ನವದೆಹಲಿಗೆ ಹೋಗಿ ತರಬೇತಿ ಪಡೆಯುವುದು ದುಬಾರಿ ಆಗುವುದರಿಂದ ಹಲವರು ಪ್ರಯತ್ನವನ್ನೇ ಮಾಡುವುದಿಲ್ಲ. ಈ ಕಾರಣದಿಂದ ಓದಲು ಬಯಸುವವರಿಗೆ ಸೌಲಭ್ಯಗಳನ್ನು ಒದಗಿಸುವ ಕುರಿತು ಮುಖ್ಯಮಂತ್ರಿಯವರ ಜತೆ ಚರ್ಚಿಸುತ್ತೇನೆ’ ಎಂದರು.

‘ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳಾಗುವವರು ಹುದ್ದೆಯನ್ನು ದರ್ಪಕ್ಕೆ ಬಳಸಬಾರದು. ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿ ಸಮಾಜದಲ್ಲಿ ಬದಲಾವಣೆ ತರಲು ಅವಕಾಶ ಇರುವುದರಿಂದ ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಹೀಗೆ ಒಳ್ಳೆಯ ಕೆಲಸ ಮಾಡಿದ ಅಧಿಕಾರಿಗಳನ್ನು ನನ್ನ ರಾಜಕೀಯ ಜೀವನದಲ್ಲಿ ಕಂಡಿದ್ದೇನೆ’ ಎಂದು ತಿಳಿಸಿದರು.

ಇಂಡಿಯಾ ಫಾರ್ ಐಎಎಸ್ ಅಕಾಡೆಮಿ ಅಧ್ಯಕ್ಷ ಸಿ.ಎಸ್.ಕೇದಾರ್ ಮಾತನಾಡಿ, ‘ದೆಹಲಿಯಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿಯಾಗಿದ್ದಾಗ ಅಲ್ಲಿಗೆ ತಯಾರಿಗೆ ಬರುತ್ತಿದ್ದ ಕನ್ನಡಿಗರನ್ನು ನೋಡಿ ಅಕಾಡೆಮಿ ಸ್ಥಾಪಿಸಿದೆವು. 5 ವರ್ಷದಲ್ಲಿ ಹಲವರು ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಹಕಾರಿಯಾಗಿದೆ. ಈ ವರ್ಷ 22 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಕನ್ನಡಿಗರೇ 19 ಮಂದಿ ಇದ್ದಾರೆ. ಕನ್ನಡಿಗರು ಮೊದಲ 10 ರ್ಯಾಂಕ್ ಒಳಗೆ ಆಯ್ಕೆಯಾಗುವುದು ಕಡಿಮೆ ಇದ್ದು, ಇದಕ್ಕಾಗಿ ವಿಶೇಷ ಗಮನ ನೀಡುತ್ತೇವೆ’ ಎಂದರು.

ಅಕಾಡೆಮಿ ಉಪಾಧ್ಯಕ್ಷ ಗಾ.ನಂ. ಶ್ರೀಕಂಠಯ್ಯ, ಸಿಇಒ ಪಿ.ಸಿ.ಶ್ರೀನಿವಾಸ್, ನಿರ್ದೇಶಕರಾದ ನಯನಕುಮಾರ್, ನವೀನ್, ಬಾಬು ಸಂದೀಪ್, ಪ್ರಕಾಶ್ ಶ್ರೀನಿವಾಸ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.