ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರಮಹಾಲಕ್ಷ್ಮಿ ಹಬ್ಬ: ಹೂವು-ಹಣ್ಣಿನ ದರ ಏರಿಕೆ

Last Updated 28 ಜುಲೈ 2020, 20:56 IST
ಅಕ್ಷರ ಗಾತ್ರ

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಹೂವು, ಹಣ್ಣಿನ ವ್ಯಾಪಾರ ಗರಿಗೆದರಿದೆ.

ಹಬ್ಬದ ಆಚರಣೆಗೆ ಜನರು ಸಜ್ಜಾಗಿದ್ದಾರೆ. ಆದರೆ, ಮೊದಲಿನಂತೆ ಮಾರುಕಟ್ಟೆಗಳು ಇಲ್ಲದಿರುವ ಕಾರಣ ಅಲ್ಲಲ್ಲಿ ಇರುವ ಹೂವು- ಹಣ್ಣಿನ ಮಳಿಗೆಗಳಲ್ಲಿ ದರಗಳು ಏರಿದ್ದು, ಗ್ರಾಹಕರ ಜೇಬಿಗೆ ಕೊಂಚ ಕತ್ತರಿ ಬಿದ್ದಂತಾಗಿದೆ.

ಸಾಮಾನ್ಯವಾಗಿ ಕೆ.ಜಿ.ಗೆ ₹500ರಂತೆ ಮಾರಾಟವಾಗುತ್ತಿದ್ದ ಕನಕಾಂಬರ ದುಬಾರಿಯಾಗಿದ್ದು, ಪ್ರತಿ ಕೆ.ಜಿ.ಗೆ ₹1,400ಕ್ಕೇರಿದೆ. ಸೇವಂತಿಗೆ, ಮಲ್ಲಿಗೆ, ಗುಲಾಬಿ ದುಬಾರಿಯಾಗಿವೆ. ಹಣ್ಣಿನ ದರಗಳು ಏರಿಕೆ ಕಂಡಿವೆ.

‘ಮಾರುಕಟ್ಟೆ ಇಲ್ಲದ ಕಾರಣಕ್ಕೆ ಈ ಬಾರಿ ಮೊದಲಿನಷ್ಟು ಪ್ರಮಾಣದ ಹೂವು ಆವಕವಾಗಿಲ್ಲ. ಕೆಲವೇ ವ್ಯಾಪಾರಿಗಳು ಮಾತ್ರ ಅಲ್ಲಲ್ಲಿ ಮಾರಾಟ ಆರಂಭಿಸಿದ್ದಾರೆ. ಇದರಿಂದ ಹೂವಿನ ದರ ಏರಿಕೆಯಾಗಿದೆ’ ಎಂದು ಹೂವಿನ ವ್ಯಾಪಾರಿ ರಮೇಶ್ ಕುಮಾರ್ ತಿಳಿಸಿದರು.

‘ವರಮಹಾಲಕ್ಷ್ಮಿ ಹಬ್ಬ ವಿಜೃಂಭಣೆಯಾಗಿ ಆಚರಿಸುವ ಹಬ್ಬಗಳಲ್ಲೊಂದು. ಆದರೆ, ಈ ಬಾರಿ ಆಚರಣೆಗೆ ಕೊರೊನಾ ಅಡ್ಡಿಯಾಗಿದೆ. ಹಬ್ಬದ ವೇಳೆ ಖರೀದಿಗೆ ಜನಜಂಗುಳಿ ಇರುತ್ತಿದ್ದ ಕೆ.ಆರ್.ಮಾರುಕಟ್ಟೆ ಸೀಲ್‍ಡೌನ್ ಆಗಿದೆ. ಹಾಗಾಗಿ, ಹಬ್ಬದ ಪ್ರಯುಕ್ತ ಹೂವು, ಹಣ್ಣಿನ ವ್ಯಾಪಾರಿಗಳು ನಗರದ ವಿವಿಧ ಪ್ರದೇಶಗಳಲ್ಲಿ ತಾತ್ಕಾಲಿಕ ಮಳಿಗೆಗಳನ್ನು ತೆರೆದುಕೊಂಡು ವ್ಯಾಪಾರ ನಡೆಸುತ್ತಿದ್ದೇವೆ’ ಎಂದವರು ಹೇಳಿದರು.

ಹೂವಿನ ದರಗಳು (ಪ್ರತಿ ಕೆ.ಜಿ.ಗೆ ₹ಗಳಲ್ಲಿ)

ಕನಕಾಂಬರ;1,400

ಸೇವಂತಿಗೆ;300

ಮಲ್ಲಿಗೆ;400

ಗುಲಾಬಿ;250

ತಾವರೆ;20 (ಒಂದಕ್ಕೆ)

ಡೇರಾ;15 (ಒಂದಕ್ಕೆ)

--

ಹಣ್ಣಿನ ದರಗಳು (ಪ್ರತಿ ಕೆ.ಜಿ.ಗೆ ₹ಗಳಲ್ಲಿ)

ಹಣ್ಣು;ಎಪಿಎಂಸಿ ದರ;ಹಾಪ್‍ಕಾಮ್ಸ್ ದರ

ಸೇಬು;140;257

ದಾಳಿಂಬೆ;110;126

ದ್ರಾಕ್ಷಿ;80;136

ಸೀಬೆ;70;50

ಸಪೋಟ;50;80

ಸೀತಾಫಲ;60;58

ಮೂಸಂಬಿ;50;67

ಏಲಕ್ಕಿ ಬಾಳೆ;52;69

ಅನಾನಸ್;25;38

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT