ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಕೃಷಿ ವಿವಿಯಲ್ಲಿ ವಿವಿಧ ಹುದ್ದೆಗಳು

Last Updated 9 ಮಾರ್ಚ್ 2023, 6:22 IST
ಅಕ್ಷರ ಗಾತ್ರ

ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ, ತನ್ನ ವ್ಯಾಪ್ತಿಯ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಖಾಲಿ ಇರುವ 26 ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಕುರಿತು ಫೆ.22 ರಂದು ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸಲು ಮಾರ್ಚ್‌ 24 ಕೊನೆ ದಿನ‌.

ಯಾವ ಹುದ್ದೆ ? ಎಷ್ಟು ಹುದ್ದೆಗಳು : ಕಂಪ್ಯೂಟರ್‌ಪ್ರೊಗ್ರಾಮರ್‌ ಅಸಿಸ್ಟೆಂಟ್‌ – 2 , ಸ್ಟೆನೊ ಗ್ರಾಫರ್‌–7, ಅಸಿಸ್ಟೆಂಟ್ಸ್‌–4, ಟ್ರ್ಯಾಕ್ಟರ್ ಚಾಲಕ –1, ಲಘು ವಾಹನ ಚಾಲಕ–5, ಅಡುಗೆ ಸಹಾಯಕ ಮತ್ತು ಕೇರ್‌ ಟೇಕರ್‌ –3 ಮತ್ತು ಮೆಸೆಂಜರ್‌ –6

ವಿದ್ಯಾರ್ಹತೆ : ಕಂಪ್ಯೂಟರ್ ಪ್ರೊಗ್ರಾಮರ್‌ ಅಸಿಸ್ಟೆಂಟ್: ಕಂಪ್ಯೂಟರ್‌ ಸೈನ್ಸ್‌ನಲ್ಲಿ ಪದವಿ(ಬಿ.ಎಸ್‌ಸಿ)/ ಬಿಸಿಎ ಪದವಿ ಅಥವಾ ಯಾವುದೇ ಪದ ವಿಯ ಜತೆ, ಒಂದು ವರ್ಷ ಅವಧಿಯ ಕಂಪ್ಯೂಟರ್‌ ಡಿಪ್ಲೊಮಾ ಅಪ್ಲಿಕೇಷನ್ಸ್‌ ಕೋರ್ಸ್‌ ಕಲಿತಿರಬೇಕು. ಕಂಪ್ಯೂಟರ್‌ನಲ್ಲಿ ಕನ್ನಡ ಜ್ಞಾನ ಕಡ್ಡಾಯ.

ಸ್ಟೆನೊಗ್ರಾಫರ್‌: ಯಾವುದೇ ಪದವಿ, ಜೊತೆಗೆ ಇಂಗ್ಲಿಷ್ ಮತ್ತು ಕನ್ನಡ ಸೀನಿಯರ್‌ ಟೈಪ್‌ರೈಟಿಂಗ್ ಹಾಗೂ ಹಿರಿಯ ಶೀಘ್ರಲಿಪಿಗಾರ ಪರೀಕ್ಷೆಯನ್ನು ಪಾಸು ಮಾಡಿರಬೇಕು. ಸ್ಟೆನೊಗ್ರಫಿ ಹುದ್ದೆಯಲ್ಲಿ ಮೂರು ವರ್ಷ ಕೆಲಸ ಮಾಡಿರುವ ಅನುಭವವಿರಬೇಕು. ಕನ್ನಡದಲ್ಲಿ ಶೀಘ್ರಲಿಪಿ ಪಾಸಾಗಿ ರುವವರಿಗೆ ಆದ್ಯತೆ.

ಅಸಿಸ್ಟೆಂಟ್‌ ಹುದ್ದೆ: ಯಾವುದೇ ಪದವಿ.

ಡ್ರೈವರ್, ಸಹಾಯಕರು ಹಾಗೂ ಮೆಸೇಂಜರ್: ಕನಿಷ್ಠ 7ನೇ ತರಗತಿ ಪಾಸಾಗಿರಬೇಕು. ದೇಹದಾರ್ಢ್ಯ ಚೆನ್ನಾಗಿರಬೇಕು. ಕ್ರಿಯಾಶೀಲರಾಗಿರಬೇಕು.ಚಾಲಕ ಹುದ್ದೆಗಳಿಗೆ ಚಾಲನಾ ಪರವಾನಗಿ ಕಡ್ಡಾಯ. ವಯೋಮಿತಿ: ಗರಿಷ್ಠ 40 ವರ್ಷ .

ಅರ್ಜಿ ಶುಲ್ಕ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ (ಕಂಪ್ಯೂಟರ್ ಪ್ರೊಗ್ರಾಮಿಂಗ್ ಅಸಿಸ್ಟೆಂಟ್‌) ₹1000. ಎಸ್ಸಿ/ಎಸ್‌ಟಿ/ ಅಭ್ಯರ್ಥಿಗಳಿಗೆ ₹500. ಅಂಗವಿಕಲರು/ನಿವೃತ್ತ ಯೋಧ ಅಥವಾ ಸೇನಾ ಯೋಧರ ಮಕ್ಕಳಿಗೆ ಶುಲ್ಕ ವಿನಾಯಿತಿ ಇದೆ. ತಾಂತ್ರಿಕೇತರ ಹುದ್ದೆಗಳಿಗೆ ಅರ್ಜಿ ಶುಲ್ಕ ₹600(ಸಾಮಾನ್ಯ ವರ್ಗದವರು). ಪ್ರ.2ಎ, 2ಬಿ,3ಎ,3ಬಿ ವರ್ಗದ ಅಭ್ಯರ್ಥಿಗಳಿಗೆ ₹300. ಎಸ್‌ಸಿ,ಎಸ್‌ಟಿ , ಅಂಗವಿಕಲರು/ನಿವೃತ್ತ ಯೋಧ ಅಥವಾ ಸೇನಾ ಯೋಧರ ಮಕ್ಕಳಿಗೆ ಶುಲ್ಕ ವಿನಾಯಿತಿ ಇದೆ. ಶುಲ್ಕವನ್ನು The Comptroller, UAS, Bangalore ಈ ಹೆಸರಲ್ಲಿ ಡಿಡಿ ತೆಗೆದು ಅರ್ಜಿ ಜೊತೆ ಸಲ್ಲಿಸಬೇಕು.

ಮಾಹಿತಿಗೆ https://uasbangalore.edu.in/index.php/notifications-en

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT