ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ 275 ಸಂಚಾರಿ ಆಂಬುಲೆನ್ಸ್‌ಗಳು ಸೇವೆಯಲ್ಲಿವೆ. ನಿತ್ಯ 900ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ವರ್ಷದಲ್ಲಿ 1,78,572 ದನಗಳು, 17,282 ಎಮ್ಮೆಗಳು, 48,566 ಕುರಿಗಳು, 28,293 ಮೇಕೆಗಳು, 359 ಹಂದಿಗಳು ಮತ್ತು 2,939 ನಾಯಿಗಳು ಹಾಗೂ ಇತರೆ ಪ್ರಾಣಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.