ಭಾನುವಾರ, ಏಪ್ರಿಲ್ 5, 2020
19 °C
ಕೊರೊನಾ ಭೀತಿ ಲೆಕ್ಕಿಸದೆ ಖರೀದಿಗೆ ಮುಗಿಬಿದ್ದ ಜನ

ಯುಗಾದಿ: ತರಕಾರಿ ದರ ದಿಢೀರ್ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದೆಲ್ಲೆಡೆ ಕೊರೊನಾ ಹಬ್ಬುವ ಭೀತಿ ಆವರಿಸಿದ ನಡುವೆಯೂ ಯುಗಾದಿ ಹಬ್ಬದ ಖರೀದಿ ಭಾರಾಟೆ ಜೋರಾಗಿತ್ತು. ಜನತಾ ಕರ್ಫ್ಯೂವಿನಿಂದಾಗಿ ಭಾನುವಾರ ಮನೆಯಲ್ಲೇ ಉಳಿದಿದ್ದ ಜನ ಸೋಮವಾರ ಹೂವು, ಹಣ್ಣು ಖರೀದಿಗೆ ಮುಗಿಬಿದ್ದರು. ಕೆಲವು ದಿನಗಳಿಂದ ನೀರಸ ವ್ಯಾಪಾರದಿಂದ ಭಣಗುಡುತ್ತಿದ್ದ ಮಾರುಕಟ್ಟೆಗಳು ಸೋಮವಾರ ಗ್ರಾಹಕರಿಂದ ತುಂಬಿದ್ದವು. ಗ್ರಾಹಕರು ಬೆಲೆ ಏರಿಕೆಯ ಬಿಸಿಯನ್ನೂ ಅನುಭವಿಸಬೇಕಾಯಿತು.

ಕೊರೊನಾ ಸೋಂಕಿನ ಹೊಡೆತಕ್ಕೆ 15 ದಿನಗಳಿಂದ ಕೆ.ಆರ್‌.ಮಾರುಕಟ್ಟೆಗೆ ಹೂವು ಆವಕವಾಗದೆ, ಇತ್ತ ಗ್ರಾಹಕರೂ ಇಲ್ಲದೆ ಖಾಲಿ ಹೊಡೆಯುತ್ತಿತ್ತು. ಗ್ರಾಹಕರು ಬಾರದ ಕಾರಣ ತರಕಾರಿ ಕೊಳ್ಳುವವರೇ ಇರಲಿಲ್ಲ. ಇದರಿಂದ ತರಕಾರಿ ದರಗಳೂ ನೆಲಕಚ್ಚಿದ್ದವು. ಆದರೆ ಯುಗಾದಿಯ ದೆಸೆಯಿಂದಾಗಿ  ಮಾರುಕಟ್ಟೆಗಳು ಮತ್ತೆ ಕಳೆಗಟ್ಟಿದವು. ಮಾರ್ಚ್‌ 31ರವರೆಗೆ ಬೆಂಗಳೂರು ಸೇರಿ ಒಂಬತ್ತು ಜಿಲ್ಲೆಗಳನ್ನು ಲಾಕ್‌ಡೌನ್‌ ಮಾಡಿದ್ದರಿಂದ ಹಬ್ಬಕ್ಕೂ ಎರಡು ದಿನ ಮುನ್ನವೇ ಅಗತ್ಯ ಸಾಮಗ್ರಿಗಳನ್ನು ದಾಸ್ತಾನು ಮಾಡಿಕೊಳ್ಳಲು ಜನ ಮುಂದಾದರು. ಮಾರು
ಕಟ್ಟೆಗಳನ್ನು ಮುಚ್ಚಬಹುದು ಎಂಬ ಆತಂಕದಿಂದ ಜನ ಮನೆಗೆ ಬೇಕಾಗುವಷ್ಟು ತರಕಾರಿ, ಹೂವು ಮತ್ತು ಹಣ್ಣು ಖರೀದಿಸಿದರು.

ಬೆಲೆ ಏರಿಕೆ: ‘ಹಬ್ಬಕ್ಕೆ ತರಕಾರಿ, ಹೂವಿನ ಬೆಲೆ ಕಡಿಮೆ ಇರಲಿದೆ. ರಜೆ ಇರುವುದರಿಂದ ಹಬ್ಬವನ್ನು ಕಡಿಮೆ ಖರ್ಚಿನಲ್ಲಿ ಆಚರಿಸ
ಬಹುದು’ ಎಂದು ಭಾವಿಸಿದ್ದ ಗ್ರಾಹಕರ ನಿರೀಕ್ಷೆ ಹುಸಿಯಾಗಿದೆ. ಹಣ್ಣು ತರಕಾರಿ ಬೆಲೆಗಳು ಭಾರಿ ಏರಿಕೆ ಕಂಡವು. ಬೀನ್ಸ್‌, ಕ್ಯಾರೆಟ್‌, ಬೆಂಡೆಕಾಯಿ, ಬದನೆ, ಟೊಮೆಟೊ ಕಳೆದ ವಾರ ₹10ರಿಂದ ₹20ರಂತೆ ಮಾರಾಟವಾಗುತ್ತಿತ್ತು. ಅವುಗಳ ದರ ದುಪ್ಪಟ್ಟಾಗಿದೆ.

‘ಹಾಪ್‌ಕಾಮ್ಸ್‌ ಸೇವೆ ಲಭ್ಯ’: ‘ಹಾಪ್‌ಕಾಮ್ಸ್‌ ಮುಚ್ಚುವಂತೆ ಇನ್ನೂ ಅಧಿಕೃತ ಆದೇಶ ಬಂದಿಲ್ಲ. ಹಬ್ಬಕ್ಕೆ ಇದರಿಂದ ಯಾವುದೇ ತೊಂದರೆಯಿಲ್ಲ. ಸರ್ಕಾರದಿಂದ ಆದೇಶ ಬಂದರೆ ಮಳಿಗೆಗಳನ್ನು ಮುಚ್ಚಲಾಗುವುದು’ ಎಂದು ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್.ಪ್ರಸಾದ್ ತಿಳಿಸಿದರು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು