ಬೆಂಗಳೂರು: ಬಾಣಸವಾಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕಸ್ತೂರಿನಗರ ಹೊರವರ್ತುಲ ರಸ್ತೆಯ ರ್ಯಾಂಪ್ನ ಕೆಂಪೇಗೌಡ ಕೆಳಸೇತುವೆ ಬಳಿ, ರೈಲ್ವೆ ಇಲಾಖೆಯಿಂದ ಕಬ್ಬಿಣದ ಪ್ಲೇಟ್ಗಳ ಮೇಲೆ ಕಾಂಕ್ರೀಟ್ ಹಾಕುವ ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು, ಈ ಭಾಗದಲ್ಲಿ 10 ದಿನ ವಾಹನ ಸಂಚಾರ ಮಾರ್ಪಾಡು ಮಾಡಲಾಗಿದೆ.

ವಾಹನ ಸಂಚಾರ ನಿರ್ಬಂಧ: ಕಸ್ತೂರಿನಗರ ಹೊರವರ್ತುಲ ಸರ್ವಿಸ್ ರಸ್ತೆಯ (ಕೆಂಪೇಗೌಡ ಕೆಳಸೇತುವೆ) ರಾಮಮೂರ್ತಿನಗರ ಕಡೆಯಿಂದ ಹಾಗೂ ಸದಾನಂದನಗರ ಕಡೆಯಿಂದ ವಿಜಿನಾಪುರ ಎಫ್ಸಿಐ ಗೋದಾಮು ಕಡೆಗೆ ಹೋಗುವ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಪರ್ಯಾಯ ಮಾರ್ಗ: ರಾಮಮೂರ್ತಿನಗರ ಜಂಕ್ಷನ್ ಮೂಲಕ ವಿಜಿನಾಪುರ ಕಡೆಗೆ ಸಂಚರಿಸುವವರು ರಾಮಮೂರ್ತಿನಗರ ಮುಖ್ಯರಸ್ತೆಯಲ್ಲಿ ನೇರವಾಗಿ ಚಲಿಸಿ, ಎಫ್ಸಿಐ ರಸ್ತೆಯ ಕಡೆಗೆ ಬಲಕ್ಕೆ ತಿರುವು ಪಡೆದು ವಿಜಿನಾಪುರ ಕಡೆಗೆ ಸಂಚರಿಸಬಹುದು.

ಸದಾನಂದನಗರ ಕಡೆಯಿಂದ ವಿಜಿನಾಪುರ ಕಡೆಗೆ ಹೋಗುವ ವಾಹನ ಸವಾರರು ಕಸ್ತೂರಿ ನಗರದ ಎರಡನೇ ಕ್ರಾಸ್ ಮೂಲಕ ರಾಮಮೂರ್ತಿನಗರ ಜಂಕ್ಷನ್ ತಲುಪಿ ವಿಜಿನಾಪುರ ಕಡೆಗೆ ಸಂಚರಿಸಬಹುದು.

ವಿಜಿನಾಪುರ ಕಡೆಯಿಂದ ಕೆಂಪೇಗೌಡ ಕೆಳಸೇತುವೆ ಮೂಲಕ ಕಸ್ತೂರಿ ನಗರದ ಕಡೆಗೆ ಸಂಚರಿಸುವವರು ವಿಜಿನಾಪುರ ರಸ್ತೆಯ ಮೂರನೇ ‘ಎ’ ಕ್ರಾಸ್ ರಸ್ತೆಯ ಮೂಲಕ ಕಸ್ತೂರಿ ನಗರದ ಕಡೆಗೆ ಸಂಚರಿಸಬಹುದು.

ವಾಹನ ನಿಲುಗಡೆ ನಿರ್ಬಂಧಿಸಿರುವ ರಸ್ತೆ: ಕಸ್ತೂರಿನಗರ ಹೊರವರ್ತುಲ ರಸ್ತೆ (ರಾಮಮೂರ್ತಿನಗರ ಸರ್ವಿಸ್ ರಸ್ತೆಯಿಂದ ಕಸ್ತೂರಿನಗರ ಸರ್ವಿಸ್ ರಸ್ತೆವರೆಗೆ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.