ಬೆಂಗಳೂರು: ಅಪರಾಧಗಳ ತನಿಖೆ ನಡೆಯುತ್ತಿರುವ ಮತ್ತು ನ್ಯಾಯಾಲಯದಲ್ಲಿ ಪ್ರಕರಣ ಎದುರಿಸುತ್ತಿರುವ ವ್ಯಕ್ತಿಗಳು ಆಯೋಜಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಧರ್ಮಸ್ಥಳಕ್ಕೆ ಭೇಟಿ ನೀಡುವುದು ಸರಿಯಲ್ಲ. ಈ ಬಗ್ಗೆ ಮರು ಪರಿಶೀಲನೆ ನಡೆಸಬೇಕು ಎಂದು ‘ಕೊಂದವರು ಯಾರು’ ಅಭಿಯಾನದ ಸದಸ್ಯರು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರಿಗೆ ಪತ್ರ ಬರೆದಿದ್ದಾರೆ.

ಅಭಿಯಾನದ ಪರವಾಗಿ ಆಶಾ ರಮೇಶ್, ಜ್ಯೋತಿ ಎ., ಗುಲಾಬಿ ಬಿಳಿಮಲೆ, ಚಂಪಾವತಿ, ಪದ್ಮರೇಖಾ ಎಸ್., ಸ್ವರ್ಣಾ ಭಟ್, ಇ. ರತಿ ರಾವ್, ರೂಪ ಹಾಸನ, ಜಯಲಕ್ಷ್ಮೀ ಪಾಟೀಲ್, ನಾ. ದಿವಾಕರ್, ದು.ಸರಸ್ವತಿ, ಗೀತಾ ಮೆನನ್, ಎನ್. ಗಾಯತ್ರಿ, ನೇಮಿಚಂದ್ರ, ಆರ್. ಪೂರ್ಣಿಮಾ, ಜೆ. ಚಂದ್ರಕುಮಾರ್, ಇಂದಿರಾ ವಿ., ಕಲ್ಪನಾ ಚಕ್ರವರ್ತಿ, ಸಬಿತಾ ಬನ್ನಾಡಿ, ಸಿ.ಜಿ. ಮಂಜುಳಾ, ಪ್ರತಿಭಾ ಆರ್., ಆರ್. ಸುನಂದಮ್ಮ, ಕೆ.ಎಸ್. ವಿಮಲಾ, ಮಲ್ಲಿಗೆ ಈ ಪತ್ರ ಬರೆದಿದ್ದಾರೆ.

ಸೌಜನ್ಯಾ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಮರುತನಿಖೆ ಅರ್ಜಿ ಸುಪ್ರೀಂ ಕೋರ್ಟ್ನಲ್ಲಿದೆ. ಗುರುತು ಪತ್ತೆಯಾಗದ ಶವಗಳನ್ನು ಅಕ್ರಮವಾಗಿ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೈಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದೆ. ಎಸ್ಐಟಿ ತನಿಖೆ ಪ್ರಕ್ರಿಯೆ ಮುಂದುವರಿದಿದೆ. ಇಂಥ ಪ್ರಕರಣಗಳಿಗೆ ಸಂಬಂಧಿಸಿದ ವ್ಯಕ್ತಿ ಅಥವಾ ಸಂಸ್ಥೆಗಳೊಂದಿಗೆ ಅತ್ಯುನ್ನತ ಹುದ್ದೆಯಲ್ಲಿ ಇರುವವರು ಸಾರ್ವಜನಿಕವಾಗಿ ಕಾಣಿಸಿಕೊಂಡರೆ, ಅವರ ಸರ್ಕಾರದ ಪರೋಕ್ಷ ಬೆಂಬಲ ಅಥವಾ ರಕ್ಷಣೆ ಇದೆ ಎಂಬ ಸಂದೇಶ ರವಾನೆಯಾಗುತ್ತದೆ. ನ್ಯಾಯಾಂಗ ವ್ಯವಸ್ಥೆಯ ಸ್ವಾಯತ್ತತೆ ಮತ್ತು ನಿಷ್ಪಕ್ಷಪಾತದ ಬಗ್ಗೆ ಸಾರ್ವಜನಿಕರ ವಿಶ್ವಾಸವನ್ನು ಕುಂದಿಸುವ ಅಪಾಯವಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-29-842995473

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.