‘ವಿಷ್ಣು ಸ್ಮಾರಕ ವಿವಾದ ಶೀಘ್ರ ಇತ್ಯರ್ಥಪಡಿಸಿ’

7
ವಿಷ್ಣು ಸೇನಾ ಸಂಘಟನೆಯಿಂದ ಒತ್ತಾಯ

‘ವಿಷ್ಣು ಸ್ಮಾರಕ ವಿವಾದ ಶೀಘ್ರ ಇತ್ಯರ್ಥಪಡಿಸಿ’

Published:
Updated:

ಬೆಂಗಳೂರು: ‘ಅಭಿಮಾನ್ ಸ್ಟುಡಿಯೊದಲ್ಲಿರುವ ವಿಷ್ಣು ಪುಣ್ಯ ಭೂಮಿ ಹಾಗೂ ಮೈಸೂರಿನಲ್ಲಿ ಸ್ಮಾರಕಕ್ಕೆ ನಿಗದಿಯಾಗಿರುವ ಜಾಗದ ಸಮಸ್ಯೆಯನ್ನು ಶೀಘ್ರ ಇತ್ಯರ್ಥಪಡಿಸಬೇಕು’ ಎಂದು ವಿ.ಎಸ್.ಎಸ್.ವಿಷ್ಣು ಸೇವಾ ಸಂಘಟನೆ ಒತ್ತಾಯಿಸಿದೆ.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಾಜು ಗೌಡ, ‘ಚುನಾವಣೆಗೂ ಮುನ್ನ ಜೆ.ಡಿ.ಎಸ್‌ ಈ ಸಮಸ್ಯೆ ಬಗ್ಗೆ ಇತ್ಯರ್ಥ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ, ಈ ಬಗ್ಗೆ ಎಲ್ಲಿಯೂ ಚಕಾರವೆತ್ತುತ್ತಿಲ್ಲ. ಇದು ವಿಷ್ಣು ಕುಟುಂಬಕ್ಕೆ ಮಾಡುತ್ತಿರುವ ಅವಮಾನ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸ್ಟುಡಿಯೋದ ಮಾಲೀಕರು ಹಾಗೂ ಮೈಸೂರಿನಲ್ಲಿ ಸ್ಮಾರಕಕ್ಕೆ ಭೂಮಿ ನೀಡುತ್ತಿರುವ ಮಾಲೀಕರು ಸಂಘಟನೆಯ ಮನವಿಗೆ ಸ್ಪಂದಿಸಿ ಸಂಧಾನಕ್ಕೆ ಬರಲು ಒಪ್ಪಿದ್ದಾರೆ. ಈಗಾಗಲೇ ಸರ್ಕಾರಕ್ಕೆ ಎರಡು ಭಾರಿ ಮನವಿ ಕೊಟ್ಟರೂ ನಿರ್ಲಕ್ಷ ಧೋರಣೆ ತೋರಿಸಿರುವುದು ಅಭಿಮಾನಿಗಳ ಆಸೆಗೆ ತಣ್ಣೀರು ಎರಚಿದಂತಾಗಿದೆ’ ಎಂದು ಹೇಳಿದರು.

‘ಶೀಘ್ರವೇ ಈ ಕುರಿತು ಸಭೆ ಕರೆಯಬೇಕು. ಮತ್ತೆ ನಿರ್ಲಕ್ಷ್ಯ ತೋರಿದರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !