ಗುರುವಾರ , ನವೆಂಬರ್ 14, 2019
18 °C

ರಾಜೇಂದ್ರ ಸಿಂಗ್‌ ಬಾಬುಗೆ ವಿಷ್ಣುವರ್ಧನ್‌ ಪ್ರಶಸ್ತಿ

Published:
Updated:

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನೀಡುವ ‘ಅಭಿನವ ಭಾರ್ಗವ ವಿಷ್ಣುವರ್ಧನ್ ಕಲಾ ದತ್ತಿ ಪ್ರಶಸ್ತಿ’ಗೆ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು ಹಾಗೂ ‘ಎ.ಆರ್. ನಾರಾಯಣಘಟ್ಟ ಮತ್ತು ಸರೋಜಮ್ಮ ಗಾಂಧಿ ಪುರಸ್ಕಾರ ಪುದುವಟ್ಟು ದತ್ತಿ ಪ್ರಶಸ್ತಿ’ಗೆ ಲೇಖಕಿ ಪ್ರೊ. ಮೀನಾ ದೇಶಪಾಂಡೆ ಮಹಿಷಿ ಆಯ್ಕೆಯಾಗಿದ್ದಾರೆ. 

ಕಸಾಪ ಅಧ್ಯಕ್ಷ ಮನು ಬಳಿಗಾರ್‌ ಅಧ್ಯಕ್ಷತೆಯ ಆಯ್ಕೆ ಸಮಿತಿ ಪ್ರಶಸ್ತಿಗಳನ್ನು ಶುಕ್ರವಾರ ಘೋಷಿಸಿದೆ. ವಿಷ್ಣುವರ್ಧನ್ ಕಲಾ ದತ್ತಿ ಪ್ರಶಸ್ತಿ ₹ 25ಸಾವಿರ ಹಾಗೂ ‘ಎ.ಆರ್. ನಾರಾಯಣಘಟ್ಟ ಮತ್ತು ಸರೋಜಮ್ಮ ಗಾಂಧಿ ಪುರಸ್ಕಾರ ಪುದುವಟ್ಟು ದತ್ತಿ ಪ್ರಶಸ್ತಿ’ ₹10ಸಾವಿರ ನಗದು ಬಹುಮಾನ ಹೊಂದಿದೆ. ಅ.11ರಂದು ಸಂಜೆ 5.30ಕ್ಕೆ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. 

ಪ್ರತಿಕ್ರಿಯಿಸಿ (+)