ಗುರುವಾರ , ನವೆಂಬರ್ 21, 2019
27 °C

ಕಾಂಗ್ರೆಸ್‌ ಪ್ರತಿಭಟನೆಗೆ ‘ಒಕ್ಕಲಿಗ ಟ್ಯಾಗ್‌’: ಸದಾನಂದಗೌಡ

Published:
Updated:

ಬೆಂಗಳೂರು: ‘ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್‌ ಅವರನ್ನು ಬೆಂಬಲಿಸಿ ಬುಧವಾರ ನಡೆಸಿದ ಪ್ರತಿಭಟನೆ ಕಾಂಗ್ರೆಸ್‌ ಪ್ರಾಯೋಜಿತ, ಅದಕ್ಕೂ ಒಕ್ಕಲಿಗ ಸಮುದಾಯಕ್ಕೂ ಸಂಬಂಧವಿಲ್ಲ’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹಾಗೂ ರಾಜ್ಯದ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಹೇಳಿದ್ದಾರೆ.

ಆ ಪ್ರತಿಭಟನೆಯಲ್ಲಿ ಇದ್ದ ರಾಮಲಿಂಗಾರೆಡ್ಡಿ, ಸೌಮ್ಯಾರೆಡ್ಡಿ, ದಿನೇಶ್‌ ಗುಂಡೂರಾವ್‌, ಉಗ್ರಪ್ಪ ಇವರ್‍ಯಾರೂ ಒಕ್ಕಲಿಗರಲ್ಲ. ಆದ್ದರಿಂದ, ಪ್ರತಿಭಟನೆಗೆ ಒಕ್ಕಲಿಗರ ಅಸ್ಮಿತೆಯ ಹೋರಾಟ ಎಂದು ಹಣೆಪಟ್ಟಿ ಕಟ್ಟುವುದು ಬೇಡ ಎಂದರು.

ಪ್ರತಿಕ್ರಿಯಿಸಿ (+)