ಶನಿವಾರ, ಮೇ 28, 2022
30 °C

ಬೆಂಗಳೂರು: ಡ್ರಗ್ಸ್ ಖರೀದಿಗಾಗಿ ವರದಕ್ಷಿಣೆಗೆ ಬೇಡಿಕೆ; ಪತಿ ವಿರುದ್ಧ ಎಫ್‌ಐಆರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಡ್ರಗ್ಸ್ ಖರೀದಿಗಾಗಿ ವರದಕ್ಷಿಣೆ ತರುವಂತೆ ಪೀಡಿಸುತ್ತಿರುವ ಮಾದಕವ್ಯಸನಿ ಪತಿ, ನನ್ನ ಅಶ್ಲೀಲ ವಿಡಿಯೊ ಹಾಗೂ ಫೋಟೊ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ’ ಎಂದು ಆರೋಪಿಸಿ ಮಹಿಳೆಯೊಬ್ಬರು ವಯ್ಯಾಲಿಕಾವಲ್‌ ಠಾಣೆಗೆ ದೂರು ನೀಡಿದ್ದಾರೆ.

‘ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ 24 ವರ್ಷದ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಅದರನ್ವಯ 27 ವರ್ಷದ ಪತಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿ ಪತಿ ಚಿಕ್ಕಮಗಳೂರಿನವ. 2021ರಲ್ಲಿ ಆತನನ್ನು ಮಹಿಳೆ ಮದುವೆಯಾಗಿದ್ದರು. ಪತಿ, ಮದ್ಯ ಹಾಗೂ ಮಾದಕ ವ್ಯಸನಿ ಎಂಬುದು ಪತ್ನಿಗೆ ಗೊತ್ತಾಗಿತ್ತು. ಅದನ್ನು ಪ್ರಶ್ನಿಸುತ್ತಿದ್ದಂತೆ ಜಗಳ ವಿಕೋಪಕ್ಕೆ ಹೋಗಿತ್ತು. ‘ನನಗೆ ನಿತ್ಯವೂ ಡ್ರಗ್ಸ್ ಬೇಕು. ಅದಕ್ಕೆ ಹಣದ ಅಗತ್ಯವಿದ್ದು, ತವರುಮನೆಯಿಂದ ಮತ್ತಷ್ಟು ವರದಕ್ಷಿಣೆ ತೆಗೆದುಕೊಂಡು ಬಾ’ ಎಂದು ಪತಿ ಪೀಡಿಸಲಾರಂಭಿಸಿದ್ದ ಎನ್ನಲಾಗಿದೆ.’

‘ಪತ್ನಿಯ ಅಶ್ಲೀಲ ವಿಡಿಯೊ ಹಾಗೂ ಫೋಟೊ ಕ್ಲಿಕ್ಕಿಸಿಟ್ಟುಕೊಂಡಿದ್ದ ಆರೋಪಿ, ಅದನ್ನು ತೋರಿಸಿ ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದ್ದ. ವರದಕ್ಷಿಣೆ ತರದಿದ್ದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುವುದಾಗಿಯೂ ಬೆದರಿಸಲಾರಂಭಿಸಿದ್ದ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.