ಮಂಗಳವಾರ, ನವೆಂಬರ್ 24, 2020
25 °C

ಅದ್ದೆ ವಿಶ್ವನಾಥಪುರ ಕೆರೆ ಅಂಗಳಕ್ಕೆ ತ್ಯಾಜ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆಸರಘಟ್ಟ: ಅದ್ದೆವಿಶ್ವನಾಥಪುರ ಕೆರೆಯಂಗಳಕ್ಕೆ ಕಟ್ಟಡ ಮತ್ತು ಹೊಟೇಲ್ ತಿನಿಸುಗಳ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

‘ಕಳೆದ ಐದಾರು ತಿಂಗಳಿನಿಂದ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ. ಕಟ್ಟಡಗಳ ಇಟ್ಟಿಗೆ ಚೂರು, ಪ್ಲಾಸ್ಟಿಕ್, ಒಡೆದ ಗಾಜುಗಳನ್ನು ರಾಶಿ ಹಾಕುತ್ತಿದ್ದಾರೆ’ ಎಂದು ಗ್ರಾಮದ ನಿವಾಸಿ ವೆಂಕಟೇಶ್ ದೂರಿದರು.

‘ಕೆರೆಯ ಅಸುಪಾಸು ನವಿಲುಗಳಿವೆ. ಅನೇಕ ವೈವಿಧ್ಯಮಯ ಜೀವ ಸಂಕುಲವಿದೆ. ಕೆರೆಯಂಗಳದಲ್ಲಿ ಮಣ್ಣಿಗಾಗಿ ಗುಂಡಿ ತೆಗೆದು ಮರಗಳನ್ನು ಕೆಡವಿದ್ದಾರೆ. ಇದರಿಂದ ಅನೇಕ ಪಕ್ಷಿ ಸಂಕುಲ ನಾಶವಾಗಿವೆ. ಅಲ್ಲದೇ ನವಿಲುಗಳು ಸಾವು ಕಂಡಿವೆ. ಕೆರೆ ನಿರ್ವಹಣೆ ಮಾಡುತ್ತಿರುವ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಏನು ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದರು. 

‘ರಾಜಾನುಕುಂಟೆ ಗ್ರಾಮ ಪಂಚಾಯಿತಿಯು ಕಸ ನಿರ್ವಹಣೆಗಾಗಿ ಘಟಕವೊಂದನ್ನು ಸ್ಥಾಪಿಸಿದೆ. ಆದರೆ, ಕೆರೆಗೆ ಕಸ ಹಾಕುವವರನ್ನು ತಡೆಯುವ ಪ್ರಯತ್ನ ಮಾಡುತ್ತಿಲ್ಲ.ಕಸ ಹಾಕುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. 

ರಾಜಾನುಕುಂಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಶ್ ಪ್ರತಿಕ್ರಿಯಿಸಿ, ‘ಕೆರೆಯಲ್ಲಿ ಕಸ ಸುರಿಯುತ್ತಿರುವವರಿಗೆ ನೋಟಿಸ್ ನೀಡಲಾಗಿದೆ. ಸಣ್ಣ ನೀರಾವರಿ ಇಲಾಖೆಗೆ ಪತ್ರ ಬರೆದು ಕಾನೂನು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದೇನೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು