ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧೆ: ನಗರಕ್ಕೆ 2ನೇ ಸ್ಥಾನ

ಯುನಿಸಿಸ್‌ ಕ್ಲೌಡ್‌ 20/20 ತಾಂತ್ರಿಕ ಸ್ಪರ್ಧೆ
Last Updated 13 ಏಪ್ರಿಲ್ 2018, 21:25 IST
ಅಕ್ಷರ ಗಾತ್ರ

ಬೆಂಗಳೂರು: ಯುನಿಸಿಸ್‌ ಇಂಡಿಯಾ 9ನೇ ವರ್ಷದ ಯುನಿಸಿಸ್‌ ಕ್ಲೌಡ್‌ 20/20 ಸ್ಪರ್ಧೆಯ ವಿಜೇತರಿಗೆ ಶುಕ್ರವಾರ ಪ್ರಶಸ್ತಿ ಪ್ರದಾನ ಮಾಡಿತು.

ಸ್ಪರ್ಧೆಯಲ್ಲಿ 8,048 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪುದುಚೇರಿಯ ಮನಕುಲ ವಿನಯಾಗರ ಎಂಜಿನಿಯರಿಂಗ್‌ ಕಾಲೇಜಿನ ಡಿ.ಸಂಥಿಯಾ ಹಾಗೂ ಜಿ.ಏಲಿಸ್‌ ಮೊನೀಕ್‌ ಅಭಿವೃದ್ಧಿ ಪಡಿಸಿದ್ದ ‘ಇಂಟ್ರೂಡರ್‌ ಪಿನ್‌ ಪ್ರಿವೆನ್ಶನ್‌’ ಯೋಜನೆಗೆ ₹ 2 ಲಕ್ಷ ಮೊತ್ತದ ಪ್ರಥಮ ಬಹುಮಾನ, ಅರವಿಂದ್‌ ಆರ್‌. ತಂಡದ ‘ವೈಬ್‌ ರೂಮ್‌’ ಯೋಜನೆಗೆ ₹1 ಲಕ್ಷ ಮೊತ್ತದ ತೃತೀಯ ಬಹುಮಾನ ನೀಡಲಾಯಿತು.

ನಗರದ ವಿಶ್ವೇಶ್ವರಯ್ಯ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ನ ವಿದ್ಯಾರ್ಥಿಗಳ ‘ಕೈನೆಕ್ಟ್‌ ಬೇಸ್ಡ್‌ ಆಲ್‌ ಜಿಮ್‌ ಟ್ರೈನರ್‌’ ಯೋಜನೆಗೆ ₹1.25 ಲಕ್ಷದ ದ್ವಿತೀಯ ಬಹುಮಾನ ಸಿಕ್ಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT