ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಲಮಂಡಳಿ: ಉಪ ವಿಭಾಗ ಕಚೇರಿ ಬದಲಾವಣೆ

Published : 30 ಆಗಸ್ಟ್ 2024, 16:24 IST
Last Updated : 30 ಆಗಸ್ಟ್ 2024, 16:24 IST
ಫಾಲೋ ಮಾಡಿ
Comments

ಬೆಂಗಳೂರು: ನಗರದ ಕುಮಾರ ಪಾರ್ಕ್ ಬಳಿಯ ರೈಲ್ವೆ ಸಮಾನಾಂತರ ರಸ್ತೆ ಬಳಿಯ ಜಲಮಂಡಳಿ ಕಟ್ಟಡದಲ್ಲಿದ್ದ ಬೆಂಗಳೂರು ಜಲಮಂಡಳಿ ಉತ್ತರ ಪೂರ್ವ-2ರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕಚೇರಿಯನ್ನು ಸದಾಶಿವನಗರದಲ್ಲಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ.

ಕೆ.ಜಿ. ಟವರ್‌, ಕುಮಾರ ಪಾರ್ಕ್‌, ಜಯಮಹಲ್‌, ಬಿ.ಇ.ಎಲ್‌. ಮತ್ತು ಸಂಜಯನಗರ ಸೇವಾ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ನೀರು ಮತ್ತು ಒಳಚರಂಡಿಗೆ ಸಂಬಂಧಿಸಿದ ದೂರುಗಳನ್ನು ನೀಡಲು ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಈ ಉಪ ವಿಭಾಗ ಕಚೇರಿಯನ್ನು ಸ್ಥಳಾಂತರಿಸಲಾಗಿದೆ ಎಂದು ಜಲಮಂಡಳಿ ಈಶಾನ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬದಲಾದ ಕಚೇರಿಯ ಸ್ಥಳ: ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ಉತ್ತರ ಪೂರ್ವ)-2 ಉಪವಿಭಾಗ, ಎರಡನೇ ಅಡ್ಡರಸ್ತೆ, ಕೆಂಪೇಗೌಡ ಗೋಪುರ, 10ನೇ ಮುಖ್ಯರಸ್ತೆ, ಸದಾಶಿವನಗರ,  ಬೆಂಗಳೂರು- 560080. ದೂರವಾಣಿ ಸಂಖ್ಯೆ– 080-22945135

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT