ಸೋಮವಾರ, ಏಪ್ರಿಲ್ 19, 2021
31 °C

‘ಜಲ ಸಂರಕ್ಷಣೆ ಮೇಳ’ಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತ್ಯಾಜ್ಯ ನೀರಿನ ಸಂಸ್ಕರಣೆ, ಮರುಬಳಕೆ ಹಾಗೂ ಜಲ ಸಂರಕ್ಷಣೆಯ ಕುರಿತು ಆಧುನಿಕ ವಿಧಾನ ಮತ್ತು ತಂತ್ರಜ್ಞಾನಗಳನ್ನು ಪರಿಚಯಿಸುವ ಉದ್ದೇಶದಿಂದ ವಾಟರ್ ಇಂಡಿಯಾ ಸಂಸ್ಥೆಯು ‘ಜಲ ಉತ್ಸವ’ ಶೀರ್ಷಿಕೆಯಡಿ ಜಲ ಸಂರಕ್ಷಣೆ ಮೇಳವನ್ನು ಮಾನ್ಯತಾ ಟೆಕ್‌ ಪಾರ್ಕ್‌ ಬಳಿಯ ಮ್ಯಾನ್‌ಫೋ ಕನ್ವೆಂಷನ್ ಸೆಂಟರ್‌ನಲ್ಲಿ ಆಯೋಜಿಸಿದೆ.

ಮೇಳಕ್ಕೆ ಅಧಿಕೃತವಾಗಿ ಗ್ರಾಹಕರಿಂದಲೇ ಗುರುವಾರ ಚಾಲನೆ ನೀಡಲಾಯಿತು. ಮಾ.6ರವರೆಗೆ ಈ ಮೇಳ ನಡೆಯಲಿದೆ.

‘ಮೂರು ದಿನಗಳು ನಡೆಯುವ ಮೇಳದಲ್ಲಿ ನೀರು ಶುದ್ಧೀಕರಣ ಯಂತ್ರಗಳ ಪ್ರದರ್ಶನ, ಮಳೆನೀರು ಸಂಗ್ರಹ ಹಾಗೂ ನೀರಿನ ಸಂರಕ್ಷಣೆ ವಿಧಾನಗಳು ಮತ್ತು ಆಧುನಿಕ ತಂತ್ರಜ್ಞಾನಗಳ ಮಾಹಿತಿಯನ್ನು ಸಾರ್ವಜನಿಕರು ಉಚಿತವಾಗಿ ಪಡೆದುಕೊಳ್ಳಬಹುದು’ ಎಂದು ಮೇಳದ ಆಯೋಜಕ ರಾಜೇಶ್ ತಿಳಿಸಿದರು.

‘ತಮ್ಮ ದಿನನಿತ್ಯದ ಬಳಕೆಯ ನಡುವೆಯೂ ನೀರಿನ ಶೇಖರಣೆ ಹಾಗೂ ಸಂಸ್ಕರಣೆ  ಕುರಿತು ವಸ್ತು ಪ್ರದರ್ಶನದಲ್ಲಿ ತಿಳಿದುಕೊಳ್ಳಬಹುದು. ವಿಶ್ವದಾದ್ಯಂತ ಹೆಚ್ಚಾಗುತ್ತಿರುವ ತಾಪಮಾನದ ಪರೋಕ್ಷ ಪರಿಣಾಮ ನೀರಿನ ಮೇಲೆ ಬಿದ್ದಿದೆ. ಇದರಿಂದ ಬಳಕೆಗೆ ಯೋಗ್ಯವಾದ ನೀರಿನ ಪ್ರಮಾಣ ಕುಸಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನೀರಿನ ಸಂರಕ್ಷಣೆ ಹಾಗೂ ಮರುಬಳಕೆ ವಿಧಾನಗಳ ಪ್ರದರ್ಶನಕ್ಕೆ ಮೇಳ ವೇದಿಕೆ ಕಲ್ಪಿಸಿದೆ’ ಎಂದರು.

‘ಮಲಿನಗೊಂಡ ನೀರಿನ ಮರುಬಳಕೆ ವಿಧಾನ,  ಶುದ್ಧೀಕರಣ ಕುರಿತು 120ಕ್ಕೂ ಹೆಚ್ಚು ನೀರಿನ ಶುದ್ಧೀಕರಣ ಕಂಪನಿಗಳು ಪ್ರದರ್ಶನದಲ್ಲಿ ಭಾಗವಹಿಸಿವೆ. ಮೇಳಕ್ಕೆ ಬರುವ ಸಾರ್ವಜನಿಕರಿಗೆ ಮಾದರಿಗಳು ಹಾಗೂ ಪ್ರಾತ್ಯಕ್ಷಿಕೆಗಳ ಮೂಲಕ ವಿವರಿಸಲಾಗುತ್ತಿದೆ. ಜಪಾನ್, ಜರ್ಮನ್, ಚೀನಾ  ಹಾಗೂ ಭಾರತದ ವಿವಿಧ ರಾಜ್ಯಗಳ ಕಂಪನಿಗಳು ಪ್ರದರ್ಶನದಲ್ಲಿ ಭಾಗಿಯಾಗಿವೆ’ ಎಂದು ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು