ಬೆಂಗಳೂರು: ಸರ್ಕಾರದ ದೈನಂದಿನ ಆಗುಹೋಗುಗಳ ಮಾಹಿತಿ ಒದಗಿಸಲು ‘ಚೀಫ್ ಮಿನಿಸ್ಟರ್ ಆಫ್ ಕರ್ನಾಟಕ’ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಚಾನಲ್ ಆರಂಭಿಸಲಾಗಿದೆ.
‘ಸರ್ಕಾರವೊಂದರ ಮುಖ್ಯಸ್ಥರ ಪೈಕಿ ಮೊಟ್ಟಮೊದಲ ವಾಟ್ಸ್‌ಆ್ಯಪ್ ಚಾನೆಲ್ ಆರಂಭಿಸಿ, ಜನಸಂಪರ್ಕ ಸಾಧನೆಯ ನಿಟ್ಟಿನಲ್ಲಿ ಮುಂದಡಿಯಿಟ್ಟವರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು’ ಎಂದು ಪ್ರಕಟಣೆ ತಿಳಿಸಿದೆ.
‘ಕಳೆದ ವಾರ ವಾಟ್ಸ್‌ಆ್ಯಪ್ ಚಾನೆಲ್ ಎಂಬ ಹೊಸ ಆವಿಷ್ಕಾರವನ್ನು ವಾಟ್ಸ್‌ಆ್ಯಪ್ ಪರಿಚಯಿಸಿತ್ತು. ಸೆ.12ರಂದು ಸಿದ್ದರಾಮಯ್ಯ ಅವರು ಚಾನಲ್ ಆರಂಭಿಸಿದ್ದರು. 50 ಸಾವಿರ ಮಂದಿ ಫಾಲೋವರ್ಸ್ ಇದ್ದಾರೆ. ಇಡೀ ದೇಶದ ಇತರೆ ರಾಜ್ಯಗಳ ಮುಖ್ಯಮಂತ್ರಿ ಪೈಕಿ ವಾಟ್ಸ್‌ಆ್ಯಪ್ ಚಾನಲ್ ಆರಂಭಿಸಿದವರಲ್ಲಿ ಸಿದ್ದರಾಮಯ್ಯ ಮೊದಲಿಗರು’ ಎಂದು ತಿಳಿಸಿದೆ.
‘ವಾಟ್ಸ್‌ಆ್ಯಪ್‌ನ ಚಾನಲ್ ಸೆಕ್ಷನ್‌ನಲ್ಲಿ ‘ಚೀಫ್ ಮಿನಿಸ್ಟರ್ ಆಫ್ ಕರ್ನಾಟಕ’ ಎಂದು ಸರ್ಚ್ ಮಾಡುವ ಮೂಲಕ ಮುಖ್ಯಮಂತ್ರಿ ಅಧಿಕೃತ ಚಾನಲ್‌ಗೆ ಸೇರ್ಪಡೆಗೊಳ್ಳಬಹುದು’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.