ಬೆಂಗಳೂರು: ‘ಪ್ರಶಸ್ತಿ ನೀಡುವಾಗ ಸರ್ಕಾರ ತಾರತಮ್ಯ ಮಾಡುತ್ತಿದೆ. ನಮ್ಮಂಥವರು ಬಹಿಷ್ಕೃತರ ಪಟ್ಟಿಯಲ್ಲಿದ್ದು, ಸರ್ಕಾರ ಖಂಡಿತ ಪ್ರಶಸ್ತಿ ನೀಡುವುದಿಲ್ಲ’ ಎಂದು ಕವಿ ಬಿ.ಆರ್. ಲಕ್ಷ್ಮಣರಾವ್ ಬೇಸರ ವ್ಯಕ್ತಪಡಿಸಿದರು.

ಸುಂದರ ಪ್ರಕಾಶನ ಭಾನುವಾರ ಹಮ್ಮಿಕೊಂಡಿದ್ದ ‘ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಿಡುಗಡೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಶಸ್ತಿಗೆ ಆಯ್ಕೆ ಮಾಡುವಾಗ ನಮ್ಮವರು, ಸ್ನೇಹಿತರು ಎಂಬುದು ಇರಬಾರದು. ಮಾಡಿದ ಕೆಲಸವನ್ನು ನೋಡಿ ಪ್ರಶಸ್ತಿಗೆ ಆಯ್ಕೆ ಮಾಡಬೇಕು’ ಎಂದು ಸಲಹೆ ನೀಡಿದರು.

ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ ಸ್ವೀಕರಿಸಿದ ನಟಿ, ನಿರ್ದೇಶಕಿ ಎಸ್.ವಿ.ಸುಷ್ಮಾ ಮಾತನಾಡಿ, ‘ಬದುಕಿನಲ್ಲಿ ಏರುಪೇರುಗಳನ್ನು ಕಂಡಿದ್ದೇನೆ. ಜೀವನವನ್ನು ಪ್ರೀತಿಸಲು ರಂಗಭೂಮಿ ಶಕ್ತಿ ನೀಡಿದೆ. ಒಬ್ಬ ಕಲಾವಿದನಿಗೆ ತನ್ನ ಎಲ್ಲ ಪ್ರತಿಭೆಯನ್ನು ಅಭಿವ್ಯಕ್ತಿಗೊಳಿಸಲು ಹೆಚ್ಚು ಅವಕಾಶ ಇರುವುದು ರಂಗಭೂಮಿಯಲ್ಲಿ ಮಾತ್ರ’ ಎಂದು ತಿಳಿಸಿದರು.

ಮಂ.ಆ. ವೆಂಕಟೇಶ್ ಅವರ ‘ಕರ್ನಾಟಕ ರಾಜ್ಯ ರಮಾರಮಣರು’ ಪುಸ್ತಕ ಬಿಡುಗಡೆ ಮಾಡಲಾಯಿತು. ವಿಜಯನಗರ ಬಿಂಬ ಮತ್ತು ಪಿ.ಇ.ಎಸ್. ವಿಶ್ವವಿದ್ಯಾಯದ ಶಿಷ್ಯವೃಂದದಿಂದ ‘ರಂಗ ಕವನ’ ಪ್ರಾಯೋಗಿಕ ರಂಗ ಪ್ರಸ್ತುತಿ ನಡೆಯಿತು. ರಂಗಕರ್ಮಿ ಗುಂಡಣ್ಣ, ಸಾಹಿತಿ ಎಚ್. ಗೋಪಾಲಕೃಷ್ಣ, ಇಂದಿರಾ ಸುಂದರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.