ಶುಕ್ರವಾರ, ಸೆಪ್ಟೆಂಬರ್ 24, 2021
27 °C

₹80 ಕೋಟಿ‌ ಮೌಲ್ಯದ ತಿಮಿಂಗಿಲ ವಾಂತಿ 'ಅಂಬರ್‌ ಗ್ರೀಸ್' ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪುರಾತನ ವಸ್ತುಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ ಐವರನ್ನು ಸಿಸಿಬಿ‌ ಪೊಲೀಸರು ಬಂಧಿಸಿದ್ದು, ಅವರಿಂದ ₹ 80 ಕೋಟಿ‌ ಮೌಲ್ಯದ ಅಂಬರ್ ಗ್ರೀಸ್ ಗಟ್ಟಿಯನ್ನು ಜಪ್ತಿ ಮಾಡಿದ್ದಾರೆ.

ಬೆಂಗಳೂರಿನ ಮಜೀಬ್ ಪಾಷಾ, ಮೊಹಮ್ಮದ್ ಮುನ್ನಾ, ಗುಲಾಬ್ ಚಂದ್, ಸಂತೋಷ್ ಹಾಗೂ ರಾಯಚೂರಿನ ಜಗನ್ನಾಥಾಚಾರ್ ಬಂಧಿತರು.

'ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿದ್ದ ಆರೋಪಿಗಳು, ತಮ್ಮ ಬಳಿ ಪುರಾತನ ವಸ್ತುಗಳನ್ನು ಇಟ್ಟುಕೊಂಡಿದ್ದರು. ಈ‌ ಬಗ್ಗೆ‌ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಲಾಗಿದೆ' ಎಂದು ಸಿಸಿಬಿ ಪೊಲೀಸರು ಹೇಳಿದರು.

'ಅಂಬರ್ ಗ್ರೀಸ್ ಎಂಬುದು ಸಮುದ್ರದಲ್ಲಿ ಸಿಗುವ ತಿಮಿಂಗಿಲು ವಾಂತಿಯಾಗಿದ್ದು, ಇದನ್ನು‌ ಸುಗಂಧ ದ್ರವ್ಯ ಹಾಗೂ ಮಾದಕವಸ್ತು ತಯಾರಿಕೆಯಲ್ಲಿ‌ ಬಳಸುತ್ತಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದಕ್ಕೆ ‌ಬೇಡಿಕೆ‌ ಹೆಚ್ಚಿದೆ' ಎಂದೂ ತಿಳಿಸಿದರು.

'ಬ್ರಿಟಿಷ್ ಈಸ್ಟ್ ಇಂಡಿಯಾ‌ ಕಂಪನಿಯ ರೆಡ್ ಮರ್ಕ್ಯೂರಿ ತಾಮ್ರದ ಬಾಟಲಿಗಳು, ಸ್ಟಿಮ್ ಪ್ಯಾನ್ ಸಹ ಆರೋಪಿಗಳ‌ ಬಳಿ ಸಿಕ್ಕಿವೆ' ಎಂದೂ ಪೊಲೀಸರು ಹೇಳಿದರು.


ಬಂಧಿತರಿಂದ ವಶಪಡಿಸಿಕೊಂಡ ಅಂಬರ್ ಗ್ರೀಸ್ ಗಟ್ಟಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು