ವ್ಹೀಲಿಂಗ್ ಫೋಟೊ ಫೇಸ್‌ಬುಕ್‌ಗೆ ಹಾಕಿ ಸಿಕ್ಕಿಬಿದ್ದ!

7

ವ್ಹೀಲಿಂಗ್ ಫೋಟೊ ಫೇಸ್‌ಬುಕ್‌ಗೆ ಹಾಕಿ ಸಿಕ್ಕಿಬಿದ್ದ!

Published:
Updated:
Deccan Herald

ಬೆಂಗಳೂರು: ವಿದ್ಯಾರ್ಥಿಯೊಬ್ಬ ತಾನು ವ್ಹೀಲಿಂಗ್ ಮಾಡುತ್ತಿರುವ ಫೋಟೊವನ್ನು ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿ ಆರ್‌.ಟಿ.ನಗರ ಸಂಚಾರ ಪೊಲೀಸರ ಅತಿಥಿಯಾಗಿದ್ದಾನೆ.

ಆರ್‌.ಟಿ.ನಗರ ಮುಖ್ಯರಸ್ತೆ ಯಲ್ಲಿ ಗುರುವಾರ ಮಧ್ಯಾಹ್ನ ವೇಗವಾಗಿ ಸ್ಕೂಟರ್ ಓಡಿಸಿಕೊಂಡು ಬಂದ ಆರೋಪಿ ಮನೋಹರ್, ಕಬಾಬ್ ಮ್ಯಾನರ್ ಹೋಟೆಲ್ ಮುಂಭಾಗ ವ್ಹೀಲಿಂಗ್ ಮಾಡಿದ್ದ. ಆ ದೃಶ್ಯವನ್ನು ಆತನ ಇನ್ನೊಬ್ಬ ಸ್ನೇಹಿತ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮನೋಹರ್ ಆ ಫೋಟೊವನ್ನು ತಕ್ಷಣ ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿದ್ದ. ಸಂಜೆ ಆ ಫೋಟೊ ನೋಡಿದ ಸಂಚಾರ ನಿಯಂತ್ರಣ ಕೇಂದ್ರದ (ಟಿಎಂಸಿ) ಸಿಬ್ಬಂದಿ, ಆರ್‌.ಟಿ.ನಗರ ಸಂಚಾರ ಠಾಣೆಗೆ ಮಾಹಿತಿ ರವಾನಿಸಿದ್ದರು. ಸ್ಕೂಟರ್‌ನ ನೋಂದಣಿ ಸಂಖ್ಯೆಯ ಸುಳಿವು ಆಧರಿಸಿ ಪೊಲೀಸರು ರಾತ್ರಿಯೇ ಮನೋಹರ್‌ನನ್ನು ವಶಕ್ಕೆ ಪಡೆದಿದ್ದಾರೆ.

‘ಆರ್‌.ಟಿ.ನಗರ, ಹೆಬ್ಬಾಳ, ಆನಂದಪುರ, ಬಳ್ಳಾರಿ ರಸ್ತೆ ಹಾಗೂ ಸಂಜಯ್‌ ನಗರದಲ್ಲಿ ವ್ಹೀಲಿಂಗ್ ಮಾಡಿರುವ ಫೋಟೊಗಳನ್ನು ಆರೋಪಿ ಫೇಸ್‌ಬುಕ್ ಖಾತೆಯಲ್ಲಿ ಹಾಕಿ ಕೊಂಡಿದ್ದಾನೆ. ಆತನ ಪೋಷಕರಿಗೆ ಠಾಣೆಗೆ ಕರೆಸಿ ಮಗನಿಗೆ ಬುದ್ಧಿ ಹೇಳುವಂತೆ ಸೂಚಿಸಿದ್ದೇವೆ’ ಎಂದು ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !